ಕುಂಜಾರುಗಿರಿ ಚಿರತೆ ಹಿಡಿಯಲು ಯಶಸ್ವಿ ಕಾರ್ಯಾಚರಣೆ : ಚಿರತೆ ಭಯದಿಂದ ನಿಟ್ಟುಸಿರಿಟ್ಟ ಗ್ರಾಮಸ್ಥರು

ಉಡುಪಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕುಂಜಾರುಗಿರಿ ಪರಿಸರದಲ್ಲಿ ರಾಶಿ ಹಾಕಿದ ಶಿಲೆ ಕಲ್ಲುಗಳಲ್ಲಿ ವಾಸವಾಗಿದ್ದ ಚಿರತೆಯನ್ನು ಕೊನೆಗೂ ಯಶಸ್ವಿಯಾಗಿ ಸರೆ ಹಿಡಿಯಲಾಗಿದೆ.

ಈ ಪರಿಸರದಲ್ಲಿ ಬಹಳ ದಿನಗಳಿಂದ ಗ್ರಾಮಸ್ಥರು ಭಯದಿಂದ ಓಡಾಟ ನಡೆಸುತ್ತಿದ್ದರು. ಚಿರತೆ ಭಯದಿಂದಾಗಿ ಈ ಪರಿಸರದ ಅಂಗನವಾಡಿಗಳಿಗೆ ರಜೆಯನ್ನೂ ನೀಡಲಾಗಿತ್ತು. ರಾತ್ರಿ ಆಗುವ ಮೊದಲೇ ಗ್ರಾಮಸ್ಥರು ತಮ್ಮ ಮನೆಯಿಂದ ಹೊರಬರಲು ಭಯಪಡುತ್ತಿದ್ದರು.

ಇದೀಗ ಅರಣ್ಯ ಇಲಾಖೆ ಇಲ್ಲಿ ಬೋನನ್ನು ಇರಿಸಿ ಚಿರತೆಯನ್ನು ಸೆರೆಹಿಡಿಯುವುದರೊಂದಿಗೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ