ವಿಟ್ಲ ಪೋಲೀಸರ ಯಶಸ್ವಿ ಕಾರ್ಯಾಚರಣೆ : 16 ಬೋರ್‌ವೆಲ್‌ ಪಂಪು ಕದ್ದ ಕುಖ್ಯಾತ ಕಳ್ಳ ಅರೆಸ್ಟ್

ವಿಟ್ಲ : ಬಂಟ್ವಾಳ ತಾಲೂಕು ಪುಣಚ ಗ್ರಾಮದ ಗುರ್ಮೆ ಎಂಬಲ್ಲಿರುವ ಗಣೇಶ್‌ ಗೌಡ ಎಂಬವರ ಮನೆಯ ಬಳಿಯ ಕಟ್ಟಡದಲ್ಲಿ ದುರಸ್ತಿಗಾಗಿ ಇರಿಸಿದ್ದ ಅಂದಾಜು 1 ಲಕ್ಷ 81 ಸಾವಿರ ರೂ ಮೌಲ್ಯದ ಒಟ್ಟು 16 ಬೋರ್‌ವೆಲ್‌ ಪಂಪುಗಳ ಕಳ್ಳತನ ಮಾಡಿದ್ಧ ಆರೋಪಿಯ ವಶಕ್ಕೆ ಪಡೆಯುವಲ್ಲಿ ವಿಟ್ಲ ಪೊಲೀಸರು ಯಶಸ್ವಿಯಾಗಿದ್ದಾರೆ.

ಬುಧವಾರ ಪೊಲೀಸರ ವಿಶೇಷ ತಂಡವು ಪ್ರಕರಣಕ್ಕೆ ಸಂಬಂಧಿಸಿ ಕಡಬ ತಾಲೂಕಿನ ಪೆರಬೆ, ಕೋಚಕಟ್ಟೆ ನಿವಾಸಿ ಆರೋಪಿ ಮಹಮ್ಮದ್ ಶಾಕೀರ್‌ನನ್ನು ಬಂಧಿಸಿದೆ .

ವಿಟ್ಲ ಠಾಣೆಯಲ್ಲಿ ದಾಖಲಾದ ಪ್ರಕರಣದ ಅನ್ವಯ ಪತ್ತೆಗಾಗಿ ವಿಶೇಷ ತಂಡ ರಚಿಸಿತ್ತು ಬಂಧನದ ವೇಳೆ ಆರೋಪಿಯಿಂದ 1 ಲಕ್ಷ 81 ಸಾವಿರ ರೂ ಮೌಲ್ಯದ 16 ಬೋರ್‌‌ವೆಲ್‌ ಪಂಪ್‌ಗಳು ಹಾಗೂ ಕಳವಿಗೆ ಉಪಯೋಗಿಸಿದ 2ಲಕ್ಷ ಮೌಲ್ಯದ ವಾಹನವಶಪಡಿಸಿಕೊಳ್ಳಲಾಗಿದೆ ಸ್ವಾಧೀನ ಪಡಿಸಿದ ಸೊತ್ತುಗಳ ಒಟ್ಟು ಮೌಲ್ಯವು 3,81,000 ರೂ ಆಗಬಹುದು ಎಂದು ಅಂದಾಜಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿ ಪತ್ತೆಯ ಕಾರ್ಯಾಚರಣೆಯಲ್ಲಿ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್.‌ ವಿಜಯ ಪ್ರಸಾದ್‌ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕ ನಾಗರಾಜ್‌ ಎಚ್‌ ನಿರ್ದೇಶನದಂತೆ ವಿಟ್ಲ ಪೊಲೀಸರು ಬಂಧಿಸಿದ್ದಾರೆ.

Related posts

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್

ಮಲ್ಪೆ ಮಹಿಳೆಯ ಬ್ಯಾಗ್‌ ಎಳೆದು ಪರಾರಿಯಾದ ಆರೋಪಿ ಪೊಲೀಸ್ ವಶಕ್ಕೆ