ವಿದ್ಯಾರ್ಥಿಯ ಗುಪ್ತಾಂಗವನ್ನು ಸಹಪಾಠಿಗಳು ಹಿಡಿದೆಳೆದು ಗಾಯ – ಆಸ್ಪತ್ರೆಗೆ ದಾಖಲು

ಸುಳ್ಯ : ಸಹಪಾಠಿಗಳು ವಿದ್ಯಾರ್ಥಿಯೋರ್ವನ ಗುಪ್ತಾಂಗವನ್ನು ಹಿಡಿದೆಳೆದು ಗಾಯಗೊಳಿಸಿರುವ ಘಟನೆ ಸುಬ್ರಹ್ಮಣ್ಯದ ಸಂಪಾಜೆಯಲ್ಲಿ ನಡೆದಿದ್ದು, ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

ವಿದ್ಯಾರ್ಥಿಗಳು ಚೇಷ್ಟೆ ಮಾಡಲು ಹೋಗಿ ಸಂಪಾಜೆಯ ಆಲಡ್ಕ ನಿವಾಸಿ 12 ವರ್ಷದ ಬಾಲಕನ ಜನನಾಂಗಕ್ಕೆ ಆಂತರಿಕವಾಗಿ ಗಾಯವಾಗಿದೆ. ಸದ್ಯ ಗಾಯಾಳು ಬಾಲಕನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು,

ಈ ಬಾಲಕ ಸಂಪಾಜೆಯ ಹಾಸ್ಟೆಲ್‌ನಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದ. ಸೆ.14ರಂದು ರಾತ್ರಿ ಹಾಸ್ಟೆಲ್‌ನಲ್ಲಿ ಇಬ್ಬರು ಸಹಪಾಠಿ ವಿದ್ಯಾರ್ಥಿಗಳು ಬಾಲಕನ ಗುಪ್ತಾಂಗ ಹಿಡಿದೆಳೆದಿದು ಗಾಯಗೊಳಿಸಿದ್ದರು ಎನ್ನಲಾಗಿದೆ. ಇದರಿಂದ ಬಾಲಕನಿಗೆ ಮೂತ್ರ ವಿಸರ್ಜನೆ ವೇಳೆ ತೀವ್ರನೋವು ಕಾಣಿಸಿಕೊಂಡಿದೆ. ಆದ್ದರಿಂದ ಬಾಲಕ ಮನೆಗೆ ಬಂದಿದ್ದಾನೆ. ಮನೆಯವರು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದರೆಂದೂ, ಅಲ್ಲಿನ ವೈದ್ಯರ ಸಲಹೆಯ ಮೇರೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತೆಂದೂ ತಿಳಿದುಬಂದಿದೆ.

ವೆನ್ಲಾಕ್‌ನಲ್ಲಿ ಶುಕ್ರವಾರ ಬಾಲಕನಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈಗ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಂಪಾಜೆ ಪೊಲೀಸ್ ಹೊರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ

ಸ್ಕೂಟರ್ ಹಾಗೂ ಗೂಡ್ಸ್ ರಿಕ್ಷಾ ಮುಖಮುಖಿ ಡಿಕ್ಕಿ – ಸವಾರ ಮೃತ್ಯು, ಸಹಸವಾರ ಗಂಭೀರ

ಫಾಸ್ಟ್‌ಟ್ಯಾಗ್‌ ಹೊಸ ನಿಯಮ ಜಾರಿ: ಕಡಿಮೆ ಬ್ಯಾಲೆನ್ಸ್ ಇದ್ರೆ ದುಪ್ಪಟ್ಟು ದಂಡ.!