ಬಾಲಕಿಯರ ವಸತಿ ನಿಲಯದ ಕಿಟಕಿ ಮೂಲಕ ವಿದ್ಯಾರ್ಥಿನಿಗೆ ಕಿರುಕುಳ – ಆರೋಪಿಗಾಗಿ ಪೊಲೀಸರ ಶೋಧ

ಮಣಿಪಾಲ : ಅನಂತನಗರದ ಬಿಸಿಎಂ ಬಾಲಕಿಯರ ವಸತಿ ನಿಲಯಕ್ಕೆ ಅಕ್ರಮ ಪ್ರವೇಶಿಸಿದ ವ್ಯಕ್ತಿಯೊಬ್ಬ ಕಿಟಕಿ ಮೂಲಕ ಕೈ ಹಾಕಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿ ಪರಾರಿಯಾಗಿರುವ ಘಟನೆ ನಸುಕಿನ ವೇಳೆ ಸಂಭವಿಸಿದೆ.

ವಸತಿ ನಿಲಯದ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿದ ವ್ಯಕ್ತಿ, ಬಳಿಕ ಕಿಟಕಿ ಮೂಲಕ ಕೈ ಹಾಕಿ ವಿದ್ಯಾರ್ಥಿನಿಯೊಬ್ಬಳ ಕೈ ಎಳೆದು ಕಿರುಕುಳ ನೀಡಿದ ಎನ್ನ‌ಲಾಗಿದೆ. ವಿದ್ಯಾರ್ಥಿನಿ ಕೂಡಲೇ ಬೊಬ್ಬೆ ಹಾಕಿದಾಗ ಆತ ಪರಾರಿಯಾದ ಎನ್ನಲಾಗಿದೆ. ಬಳಿಕ ಹಾಸ್ಟೆಲ್‌ನಲ್ಲಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಬಂದು ಹೋಗಿರುವುದು ಕಂಡುಬಂದಿದೆ. ಆದರೆ ಆತನ ಮುಖ ಚಹರೆ ಸ್ಪಷ್ಟವಾಗಿ ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ವಸತಿ ನಿಲಯದ ವಾರ್ಡನ್ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ