ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಟ್ರೇಡ್ ಯೂನಿಯನ್ ವತಿಯಿಂದ ಸಿಬ್ಬಂದಿ ನೇಮಕಾತಿಯ ಬಗ್ಗೆ ಧರಣಿ

ಮಂಗಳೂರು : ಅಖಿಲ ಭಾರತ ಯೂನಿಯನ್ ಬ್ಯಾಂಕ್ ಒಫ್ ಇಂಡಿಯಾ ಎಂಪ್ಲಾಯೀಸ್ ಅಸೋಸಿಯೇಷನ್ ​ಹಾಗೂ ಅಖಿಲ ಭಾರತ ಯೂನಿಯನ್ ಬ್ಯಾಂಕ್ ಆಫೀಸರ್ಸ್ ಫೆಡರೇಶನ್ ವತಿಯಿಂದ, ಸಿಬ್ಬಂದಿ ನೇಮಕಾತಿಯಲ್ಲಿ ವಿಳಂಬವಾಗುವ ಬಗ್ಗೆ ಹಾಗೂ ಇತರ ಗ್ರಾಹಕ ಸ್ನೇಹಿ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ವಿವಿಧ ಸಂದರ್ಭಗಳಲ್ಲಿ ಮ್ಯಾನೇಜ್‌ಮೆಂಟ್‌ಗೆ ಮಾಹಿತಿ ನೀಡಿದ್ದರೂ, ಕಳೆದ ಎರಡು ವರ್ಷಗಳಿಂದ ವಿವಿಧ ಸಮಸ್ಯೆಗಳಿಗೆ ಸೌಹಾರ್ದಯುತ ಪರಿಹಾರ ನೀಡುವಲ್ಲಿ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ.

ಪ್ರಮುಖವಾಗಿ ಎರಡೂ ಟ್ರೇಡ್ ಯೂನಿಯನ್‌ನ ಬೇಡಿಕೆಯಂತೆ ಸಿಬ್ಬಂದಿ ಕೊರತೆ ಮತ್ತು ಅಪ್ರೆಂಟಿಸ್ ನೇಮಕಾತಿಯೆoಬ, ಅನಿಷ್ಟ ಪದ್ಧತಿಯು ಯುವ ಸಮುದಾಯನ್ನು ವಂಚಿಸುತ್ತಿರುವ ಪ್ರಕ್ರಿಯೆಯನ್ನು ತಕ್ಷಣ ಕೈ ಬಿಡುವಂತೆ ಹಾಗೂ ರಚನಾತ್ಮಕವಾಗಿ ತೊಡಗಿಸಿಕೊಳ್ಳಲು ಅನೇಕ ಭಾರಿ ಪ್ರಯತ್ನಿಸಿದರೂ, ಯಾವುದೇ ಅರ್ಥಪೂರ್ಣ ಚರ್ಚೆಗೆ ಆಸ್ಪದ ನೀಡಿರಲಿಲ್ಲ. ಈ ಹಿನ್ನಲೆಯಲ್ಲಿ AIUBOF ಮತ್ತು AIUBEA ಯು ಬ್ಯಾಂಕ್‌ನ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಿ ಬ್ಯಾಂಕಿನ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ, ನಮ್ಮೊಂದಿಗೆ ಸಹಕರಿಸುವಂತೆ ಒತ್ತಾಯಿಸಲಾಯಿತು.

ಈ ಸಂಬಂಧವಾಗಿ 18.09.2024ರಂದು ಮಂಗಳೂರಿನ ಪಾಂಡೇಶ್ವರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವಲಯ ಕಚೇರಿಯ ಮುಂಭಾಗದಲ್ಲಿ ಜಂಟಿ ಟ್ರೇಡ್ ಯೂನಿಯನ್ ವತಿಯಿಂದ ಧರಣಿ ಪ್ರದರ್ಶನವನ್ನು ನಡೆಸಲಾಯಿತು. ಧರಣಿಯ ನೇತೃತ್ವವನ್ನು, AIUBOF ನ ಉಪ ಪ್ರಧಾನ ಕಾರ್ಯದರ್ಶಿ ಶ್ರೀ ನಿಕಿತ್. ಎನ್.ಶ್ರೀಯಾನ್, UBIEA-K ಪ್ರಧಾನ ಕಾರ್ಯದರ್ಶಿ ಆರ್ ಕೆ ಬಲ್ಲಾಳ್, UBIOA-K ಹಿರಿಯ ಉಪಾಧ್ಯಕ್ಷ ಶ್ರೀ ನಾರಾಯಣ ದೇಶಪಾಂಡೆ, UBIEA-K ಮಂಗಳೂರು ಅಧ್ಯಕ್ಷ ಶ್ರೀ ಸುರೇಶ್, ಕಾರ್ಯದರ್ಶಿ ಶ್ರೀಮತಿ ಬೇಬಿ. ಕೆ, ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ರಾಜೇಂದ್ರನ್, ಜೊತೆ ಕಾರ್ಯದರ್ಶಿ ಜೆಮ್ ಮ್ಯಾಥ್ಯೂ, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್‌ನ ಸಿಬ್ಬಂದಿಗಳು ಪಾಲ್ಗೊಂಡರು.

Related posts

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ

ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಗೆ ಭಕ್ತರಿಂದ 1.5 ಲಕ್ಷ ಚೆಂಡು ಮಲ್ಲಿಗೆ ಸಮರ್ಪಣೆ