ಖಾಸಗಿ ಬಸ್ ಚಾಲಕ, ಮಾಲಕರು ಕಡ್ಡಾಯ ನಿಯಮ ಪಾಲಿಸುವಂತೆ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ

ಉಡುಪಿ : ಜಿಲ್ಲಾ ಪೊಲೀಸ್‌ ಇಲಾಖೆ ವತಿಯಿಂದ ಉಡುಪಿ ಸಿಟಿ ಬಸ್‌ ಮಾಲಕರು ಮತ್ತು ಸರ್ವಿಸ್‌ ಬಸ್‌ ಮಾಲಕರ ಸಭೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ನಡೆಯಿತು. ಸಂಚಾರ ಪೊಲೀಸ್‌ ಠಾಣೆ ಉಪ ನಿರೀಕ್ಷಕ ಸುದರ್ಶನ್‌ ದೊಡ್ಡಮನಿ ಅವರು ಬಸ್‌ ಮಾಲಕರನ್ನು ಉದ್ದೇಶಿಸಿ ಕಾನೂನು ನಿಯಮಗಳನ್ನು ಪಾಲಿಸುವ ಬಗ್ಗೆ ಸೂಚನೆ ನೀಡಿದರು.

ಕರ್ಕಶ ಹಾರ್ನ್‌ಗಳನ್ನು ಜೂನ್ 15ರ ಒಳಗೆ ತೆರವುಗೊಳಿಸಬೇಕು. ಟೇಪ್‌ರೆಕಾರ್ಡ್‌, ಸ್ಪೀಕರ್‌ ತೆಗೆಯಬೇಕು, ಸಿ.ಸಿ. ಕೆಮರಾ ಅಳವಡಿಸುವುದು. ನಿಗದಿತ ವೇಳಾಪಟ್ಟಿಯಂತೆ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಚಲಾಯಿಸುವುದು. ಕರಾವಳಿ ಜಂಕ್ಷನ್‌ನಲ್ಲಿ ಬಸ್‌ ನಿಲ್ದಾಣಕ್ಕೆ ಹೋಗದೇ ದಾರಿಯಲ್ಲಿ ಪಿಕ್‌‌ಆಪ್‌ ಮಾಡುವುದರಿಂದ ಸಾರ್ವಜನಿಕರಿಗೆ ಮತ್ತು ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರಿಂದ ಚಾಲಕರು ಬಸ್‌ ನಿಲ್ದಾಣಕ್ಕೆ ಹೋಗಿ ಪಿಕ್‌‌ಅಪ್‌ ಮಾಡುವಂತೆ ಸೂಚಿಸಿದರು.

ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಸಮಯ ಕಡ್ಡಾಯ ಸಮವಸ್ತ್ರ ಧರಿಸಬೇಕು. ವೇಗವಾಗಿ ಚಲಾಯಿಸಬಾರದು. ಮೊಬೈಲ್‌ ಪೋನ್‌ ಉಪಯೋಗಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸದಿರಿ ಎಂದರು. ತಪ್ಪಿದ್ದಲ್ಲಿ ಮುಂದೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ತಿಳಿಸಿದರು.

Related posts

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ

ಮೂಡಲಪಾಯ ಯಕ್ಷಗಾನದ ಅಭ್ಯುದಯವನ್ನು ಬೆಂಬಲಿಸಲು ಅಕಾಡೆಮಿ ಬದ್ಧವಾಗಿದೆ : ಡಾ. ತಲ್ಲೂರು

ಕರವೇ ಕಾಪು ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ