ನವಂಬರ್ 11ಕ್ಕೆ ರಾಜ್ಯ ಮಟ್ಟದ ಶೈಕ್ಷಣಿಕ ವಿಚಾರ ಸಂಕಿರಣ

ಉಡುಪಿ : ಉಡುಪಿ ಮತ್ತು ದಕ್ಷಿಣ ಕನ್ನಡದ ಐ.ಸಿ.ಎಸ್.ಇ. ಹಾಗೂ ಸಿ.ಬಿ.ಎಸ್.ಇ. ಶಾಲೆಗಳ ಒಕ್ಕೂಟ ಮತ್ತು ಬ್ರಹ್ಮಾವರ ಎಸ್‌ಎಂಎಸ್‌ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ವಿಚಾರ ಸಂಕಿರಣವನ್ನು ನವಂಬರ್ 11ರಂದು ಬೆಳಗ್ಗೆ 9ಗಂಟೆಗೆ ಬ್ರಹ್ಮಾವರದ ಎಸ್‌ಎಂಎಸ್ ಕಮ್ಯುನಿಟಿ ಹಾಲ್‌ನಲ್ಲಿ ಆಯೋಜಿಸಲಾಗಿದೆ.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಎಂಎಸ್‌ ಶಾಲೆಯ ಪ್ರಾಂಶುಪಾಲೆ ಅಭಿಲಾಷ, ಮಾನವತೆಯ ಔನ್ನತ್ಯಕ್ಕಾಗಿ ಶಿಕ್ಷಣ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ಈ ವಿಚಾರ ಸಂಕಿರಣವನ್ನು ಬ್ರಹ್ಮಾವರದ ಓಎಸ್‌ಸಿ ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ರೆ.ಫಾ.ಎಂ.ಸಿ.ಮಥಾಯ್ ಉದ್ಘಾಟಿಸಲಿರುವರು. ಅಜೀಮ್ ಪ್ರೇಮಿ ಫೌಂಡೇಶನ್‌ನ ಪ್ರೊ.ಗಿರಿಧರ್ ದಿಕ್ಸೂಚಿ ಭಾಷಣ ಮಾಡಲಿರುವರು ಎಂದರು.

ಡಾ.ನೀತಾ ಇನಾಮ್ದಾರ್, ರಾಜಾರಾಮ್ ತೋಳ್ಳಾಡಿ, ಡಾ.ಅರ್ಚನಾ ಭಟ್, ಅಶೋಕ್ ಕಾಮತ್, ಶುಭಂಕರ್ ಪೌಲ್, ಮೆರಿಡಾ ಡಿ ಅಲ್ವೇಡಾ, ಪ್ರೊ. ಮಾಡ್ಯೂ ಸಿ. ನಯನನ್ ಮೊದಲಾದವರಿಂದ ಉಪನ್ಯಾಸ ಹಾಗೂ ಚರ್ಚೆಗಳು ನಡೆಯಲಿವೆ. ಸಂಜೆ 4ಗಂಟೆಗೆ ನಡೆಯುವ ಸಮಾರೋಪ ಭಾಷಣವನ್ನು ಕನ್ನಡ ಕೀಲಿಮಣೆ ತಜ್ಞ ಪ್ರೊ.ಕೆ.ಪಿ.ರಾವ್‌ ಮಾಡಲಿದ್ದಾರೆ. ಇದರಲ್ಲಿ ರಾಜ್ಯದ ವಿವಿಧ ಭಾಗದ ಸುಮಾರು 300 ಶಿಕ್ಷಕರು, ಪ್ರಾಂಶುಪಾಲರು, ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಶಾಲೆಯ ಕಾರ್ಯದರ್ಶಿ ಲೂವಿಸ್ ಫೆರ್ನಾಂಡಿಸ್‌, ಒಕ್ಕೂಟದ ಕಾರ್ಯದರ್ಶಿ ಗೀತಾ ಶಶಿಧರ್ ಉಪಸ್ಥಿತರಿದ್ದರು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್