ಇಂದಿನಿಂದ ಎಸೆಸೆಲ್ಸಿ ಪರೀಕ್ಷೆ – ಜಿಲ್ಲೆಯಲ್ಲಿ 51 ಪರೀಕ್ಷಾ ಕೇಂದ್ರಗಳ ಸ್ಥಾಪನೆ

ಉಡುಪಿ : ಶೈಕ್ಷಣಿಕ ಜೀವನದ ಪ್ರಮುಖ ಘಟ್ಟಗಳಲ್ಲಿ ಎಸೆಸೆಲ್ಸಿ ಒಂದಾಗಿದ್ದು, ಇಂದಿನಿಂದ ಎಪ್ರಿಲ್ 4‌ರವರೆಗೆ ವಾರ್ಷಿಕ ಪರೀಕ್ಷೆ ನಡೆಯಲಿದ್ದು ಜಿಲ್ಲೆಯಲ್ಲಿ 51 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಮೊದಲ ದಿನವೇ ಪ್ರಥಮ ಭಾಷ ವಿಷಯ ಇದ್ದು, ಕನ್ನಡ ಮಾಧ್ಯಮದ ಬಹುತೇಕರಿಗೆ ಕನ್ನಡ ಪರೀಕ್ಷೆ ಇರಲಿದೆ. ಉಳಿದಂತೆ ಆಯಾ ಮಾಧ್ಯಮಗಳ ವಿಷಯದ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಸುಸೂತ್ರವಾಗಿ ಪರೀಕ್ಷೆ ಬರೆಯಲು ಬೇಕಾದ ಎಲ್ಲ ಭದ್ರತಾ ಕ್ರಮಗಳನ್ನು ಜಿಲ್ಲಾಡಳಿತ, ಜಿಪಂ ಮತ್ತು ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆ ಕೈಗೊಂಡಿದೆ.

ರಾಜ್ಯದ ಏಕೈಕ ಜಿಲ್ಲೆಯಲ್ಲಿ ಎಂಬಂತೆ ಎಸೆಸೆಲ್ಸಿ ಅಣಕು ಪರೀಕ್ಷೆ‌ಯನ್ನು ಏರ್ಪಡಿಸಿದ್ದರಿಂದ ವಿದ್ಯಾ‌ರ್ಥಿಗಳಿಗೆ ತಮ್ಮ ಪರೀಕ್ಷಾ ಕೇಂದ್ರ ಮತ್ತು ಕೊಠಡಿಯಲ್ಲಿ ತಾವು ಕುಳಿತು ಕೊಳ್ಳಬೇಕಾದ ಜಾಗದ ಸ್ಪಷ್ಟತೆ ಸಿಕ್ಕಿದೆ. ಆದರೂ, ಎಲ್ಲ ಕೇಂದ್ರಗಳ ಹೊರ ಭಾಗದಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಸಹಿತವಾಗಿ ಕೊಠಡಿ ಮಾಹಿತಿ ಸೂಚನಾ ಫಲಕಗಳಲ್ಲಿ ಲಭ್ಯವಿರಲಿದೆ. ಕೊಠಡಿಯ ಒಳಗಿನ ಡೆಸ್ಕ್‌ಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಬರೆಯಲಾಗಿದೆ.

ಪರೀಕ್ಷಾ ಕೇಂದ್ರದ 200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

Related posts

‘ಸಿಎಂ ಸಿದ್ರಾಮಯ್ಯನನ್ನು ಕೊಂದ್ರೆ ಹಿಂದುಗಳಿಗೆ ನೆಮ್ಮದಿ’ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ ಸಂಪತ್ ಅರೆಸ್ಟ್

ಉಡುಪಿ ಕಡಲತೀರದಲ್ಲಿ ಪೆಹಲ್ಗಾಮ್ ಹಿಂದೂ ನರಮೇಧದ ಮೃತರ ಆತ್ಮಕ್ಕೆ ಶಾಂತಿ ಕೋರಿ ಅಪರಕ್ರಿಯೆ

ತಂದೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೆರೋಲ್‌ನಲ್ಲಿ ಉಡುಪಿಗೆ ಆಗಮಿಸಿದ ಭೂಗತ ಪಾತಕಿ ಬನ್ನಂಜೆ ರಾಜ