ಶ್ರೀ ಕ್ಷೇತ್ರ ಆದಿಶಕ್ತಿ ದೊಡ್ಡಣ್ಣಗುಡ್ಡೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ : ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಸಂಪನ್ನಗೊಳ್ಳುತ್ತಿರುವ ಶರನ್ನ‌ವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಶ್ರೀ ಕ್ಷೇತ್ರದ ನವಶಕ್ತಿ ವೇದಿಕೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ದೀಪ ಬೆಳಗಿಸಿ ಚಾಲನೆ ನೀಡಿದರು.

ಗತಕಾಲದ ಕ್ಷೇತ್ರ ಇತಿಹಾಸ ತಿಳಿಸುವಂತೆ ನಾಟ್ಯರಾಣಿ ಗಂಧರ್ವ ಕನ್ಯೆ ದೇವಿಯಿಂದ ಅನುಗ್ರಹಿತಳಾದ ತಾಣದಲ್ಲಿ ಕಲಾವಿದರಿಗೆ ವಿಶೇಷವಾಗಿ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಪ್ರತೀತಿ ಇರುವ ಹಿನ್ನಲೆಯಲ್ಲಿ ಅನೇಕ ಕಲಾವಿದರು ತಮ್ಮ ಕಲಾ ಕಾಣಿಕೆಯನ್ನು ಪರ್ವಕಾಲದಲ್ಲಿ ಸಮರ್ಪಿಸಿ ಅನುಗ್ರಹಕ್ಕೆ ಪಾತ್ರರಾಗುತ್ತಿದ್ದಾರೆ. ಹಾಗಾಗಿ ಕ್ಷೇತ್ರ ಸಾಂಸ್ಕೃತಿಕ ವೈಭವವನ್ನು ಪಡೆದುಕೊಂಡಿದೆ.

ಗಾನ-ನಾಟ್ಯ-ನಾದ ಪ್ರಿಯಳೆಂದು ಪ್ರಖ್ಯಾತಿ ಹೊಂದಿರುವ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ಅಭಿಮುಖವಾಗಿ ನೃತ್ಯಾರ್ಥಿಗಳು ತಮ್ಮ ನೃತ್ಯ ಸೇವೆಯನ್ನ ಸಮರ್ಪಿಸಿ ಕೃತಾರ್ಥರಾಗುತ್ತಿದ್ದಾರೆ.
ನಾದ ವಾದಕರು ನಾದ ಸೇವೆಯನ್ನು ನೀಡಿ, ಗಾಯಕರು ತಮ್ಮ ಗಾಯನ ಸೇವೆಯನ್ನು ನೀಡಿ ವಿಶೇಷ ಅನುಗ್ರಹವನ್ನು ಪಡೆದುಕೊಳ್ಳುವುದು ಉಲ್ಲೇಖನೀಯ.

ಸೇವೆ ನೀಡಿದ ಕಲಾವಿದರನ್ನು ಧರ್ಮದರ್ಶಿ ಶ್ರೀ ಶ್ರೀ ರಮಾನಂದ ಗುರೂಜಿ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸುತ್ತಿದ್ದಾರೆ.
ಕ್ಷೇತ್ರ ರಚನೆಗೆ ಕಾರಣೀಭೂತರಾದ ಕಪಿಲ ಮಹರ್ಷಿಗಳ ಸನ್ನಿಧಾನದಲ್ಲಿಯೂ ಕೂಡ ಕಲಾವಿದರು ತಮ್ಮ ಕಲಾ ಸೇವೆಯನ್ನು ಸಮರ್ಪಿಸಿ ಗುರುಗಳ ಅನುಗ್ರಹಕ್ಕೂ ಪಾತ್ರರಾಗುತ್ತಿದ್ದಾರೆ ಇದು ಈ ಬಾರಿಯ ನವರಾತ್ರಿಯ ವಿಶೇಷ ಎನ್ನುತ್ತಾರೆ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್.
ಕ್ಷೇತ್ರದಲ್ಲಿ ಪ್ರಾತಃಕಾಲದಿಂದಲೇ ಭಜನೆ ಸಂಕೀರ್ತನೆ ಲಕ್ಷ್ಮೀಶೋಭಾನೆ ಲಲಿತಾ ಸಹಸ್ರನಾಮ ಸುಗಮ ಸಂಗೀತ ನಿರಂತರವಾಗಿ ಕ್ಷೇತ್ರಕ್ಕೆ ಸಮರ್ಪಿತವಾಗುತ್ತಿವೆ.

ಷಷ್ಠಿ ತಿಥಿಯಿಂದ ಅಕ್ಷರಭ್ಯಾಸಕ್ಕೆ ಚಾಲನೆ
ದಕ್ಷಿಣ ಭಾರತದಲ್ಲಿ ಅತಿ ಎತ್ತರವಾದ ಮೇರು ಶ್ರೀ ಚಕ್ರವನ್ನು ಹೊಂದಿರು‌ವ ಶ್ರೀ ಕ್ಷೇತ್ರದಲ್ಲಿ ತಾರೀಕು 9ರ ಬುಧವಾರ ಷಷ್ಟಿ ತಿಥಿಯಿಂದ ಮಕ್ಕಳಿಗೆ ಅಕ್ಷರಭ್ಯಾಸಕ್ಕೆ ಚಾಲನೆ ದೊರೆಕಲಿದೆ. ಅಂದು ಬೆಳಿಗ್ಗೆ 11:00 ಯಿಂದ ಅಕ್ಷರಭ್ಯಾಸ ಆರಂಭವಾಗಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !