ಕೆಎಂಸಿಯಿಂದ ಗಾಯ ನಿಭಾವಣೆ ಕುರಿತು ವಿಶೇಷ ಕಾರ್ಯಾಗಾರ

ಮಣಿಪಾಲ : ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ನ ಕಸ್ತೂರ್ಬಾ ಮೆಡಿಕಲ್‌ ಹಾಸ್ಪಿಟಲ್‌ [ಕೆಎಂಸಿ] ಯಲ್ಲಿ ಕಾರ್ಯನಿರ್ವಹಿಸುವ ಮಣಿಪಾಲ್‌ ಸೆಂಟರ್‌ ಫಾರ್‌ ಇಂಟರ್‌ಪ್ರೊಫೆಶನಲ್‌ ಅಡ್ವಾನ್ಸ್‌ಡ್‌ ಹೆಲ್ತ್‌ ಕೇರ್‌, ಸೆಂಟರ್‌ ಫಾರ್‌ ರೀ-ಸಸ್ಸಿಟೇಶನ್‌, ಅಕ್ಯೂಟ್‌ ಕೇರ್‌ ಮತ್ತು ಸೆಮಲ್ಟೇಶನ್‌ ಟ್ರೆನಿಂಗ್‌ [ಸಿಆರ್‌ಇಎಸ್‌ಟಿ], ಸೆಂಟರ್‌ ಫಾರ್‌ ಕ್ಲಿನಿಕಲ್‌ ಆ್ಯಂಡ್‌ ಇನ್ನೋವೇಟಿವ್‌ ಫೋರೆನ್ಸಿಕ್ಸ್‌-ಇವುಗಳ ಸಹಭಾಗಿತ್ವದಲ್ಲಿ ವಿವಿಧ ರೀತಿಯ ಆಘಾತ ಮತ್ತು ಗಾಯಗಳ ನಿರ್ವಹಣೆಯ ಕುರಿತ ಕಾರ್ಯಾಗಾರವನ್ನು ಆಯೋಜಿಸಲಾಯುತು.

ಆರೈಕೆ ಕ್ರಮಗಳ ಬಗ್ಗೆ ಮತ್ತು ಗಾಯಗಳು ತೀವ್ರಗೊಂಡು ಪ್ರಾಣಾಪಾಯವಾಗುವುದನ್ನು ತಪ್ಪಿಸುವ ಬಗ್ಗೆ ಈ ಕಾರ್ಯಾಗಾರದಲ್ಲಿ ತರಬೇತಿಯನ್ನು ನೀಡಲಾಯಿತು. ತುರ್ತು ಸಂದರ್ಭದಲ್ಲಿ ತರಬೇತಿ ಹೊಂದಿದ ಪ್ರತಿಪ್ರೇಷಕರು ಆಘಾತಕ್ಕೊಳಗಾದವರ ಸ್ಥಿತಿಯನ್ನು ಸ್ಥಿರಗೊಳಿಸಿ, ಸಂಪನ್ಮೂಲಗಳನ್ನು ಬಳಸಿ, ಅವರನ್ನು ಹೇಗೆ ಬದುಕುಳಿಯುವಂತೆ ಮಾಡಬಹುದು ಎಂಬ ವಿಚಾರದ ಬಗ್ಗೆ ಕಾರ್ಯಾಗಾರಲ್ಲಿ ವಿವರಿಸಲಾಯಿತು.

ಉಡುಪಿಯ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಪರಮೇಶ್ವರ ಎ. ಹೆಗ್ಡೆ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿ ಆಘಾತಕ್ಕೊಳಗಾಗುವವರ ಗಾಯವನ್ನು ಆರೈಕೆ ಮಾಡುವ ಪ್ರಥಮ ಪ್ರತಿಪ್ರೇಷಕರ ಕೌಶಲವನ್ನು ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ. ಆಘಾತಗಳನ್ನು ಪ್ರಾಯೋಗಿಕವಾಗಿ ನಿರ್ವಹಿಸಿ ಮಾನವೀಯವಾಗಿ ಸ್ಪಂದಿಸುವ ನೆಲೆಯಲ್ಲಿ ಉಡುಪಿಗೆ ಅತ್ಯುನ್ನತ ಸ್ಥಾನ ದೊರಕಿಸಿಕೊಡಬೇಕಿದೆ. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರಗಳ ಪಾತ್ರ ಮಹತ್ವದ್ದಾಗಿದೆ’ ಎಂದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !