ಸ್ಪೀಕರ್ ಯು.ಟಿ.ಖಾದರ್‌ಗೆ ತುಳು ಅಕಾಡೆಮಿಯಿಂದ ಸನ್ಮಾನ

ಮಂಗಳೂರು : ಕರ್ನಾಟಕ ವಿಧಾನಸಭೆಯಲ್ಲಿ ಕಲಾಪದ ವೇಳೆ ಶಾಸಕರಿಗೆ ತುಳು ಭಾಷೆಯನ್ನು ಮಾತನಾಡಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಂಗಳೂರಲ್ಲಿ ಸನ್ಮಾನಿಸಿದರು.

ಖಾದರ್ ಅವರಿಗೆ ಸಾಲು ಹಾಗೂ ಪುಸ್ತಕ ಮತ್ತು ಸ್ಮರಣಿಕೆ ನೀಡಿ, ಅಭಿನಂದಿಸಿದರು. ಈ ವೇಳೆ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ರೋಹಿತ್ ಉಳ್ಳಾಲ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಉಪಸ್ಥಿತರಿದ್ದರು.

ಯು.ಟಿ ಖಾದರ್‌ ಸ್ಪೀಕರ್‌ ಆದ ಬಳಿಕ ವಿಧಾನಸಭೆ ಕಲಾಪದಲ್ಲಿ ತುಳು ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿದೆ. ಕಲಾಪದಲ್ಲಿ ಕರಾವಳಿ ಜಿಲ್ಲೆಯ ಶಾಸಕರು ತುಳು ಮಾತನಾಡಲು ಅವಕಾಶ ಸಿಕ್ಕಿದೆ. ಖುದ್ದು ಸ್ಪೀಕರ್‌ ಕೂಡ ಶಾಸಕರ ಜೊತೆ ತುಳುವಿನಲ್ಲೇ ಮಾತನಾಡಿದ್ದಾರೆ.

ಸ್ಪೀಕರ್‌ ಅವರು ಕರಾವಳಿಯ ಶಾಸಕರಾದ ಅಶೋಕ್‌ ರೈ, ವೇದವ್ಯಾಸ್‌ ಕಾಮತ್‌, ಸುನಿಲ್‌ ಕುಮಾರ್‌ ಜೊತೆ ತುಳುವಿನಲ್ಲಿ ಮಾತನಾಡಿರುವ ವೀಡಿಯೋ ವೈರಲ್‌ ಆಗಿತ್ತು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಕನ್ನಡ ಚಿತ್ರನಟರಿಂದ ಶ್ರೀಕೃಷ್ಣ ದರ್ಶನ – ಕೋಟಿಗೀತಾಲೇಖನ ಯಜ್ಞ ದೀಕ್ಷೆ