ಊರ ಗಣೇಶೋತ್ಸವದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಭಾಗಿ

ಉಡುಪಿ : ಖ್ಯಾತ ನಟ ರಕ್ಷಿತ್ ಶೆಟ್ಟಿ, ತನ್ನ ತವರೂರಿನ ಸಾರ್ವಜನಿಕ ಗಣೇಶೋತ್ಸವದಲ್ಲಿ ಭಾಗಿಯಾಗಿದ್ದಾರೆ.

ಉಡುಪಿಯ ಕುಕ್ಕಿಕಟ್ಟೆ ನಿವಾಸಿಯಾಗಿರುವ ರಕ್ಷಿತ್ ಶೆಟ್ಟಿ, ತನ್ನ ಮೂಲ ಗ್ರಾಮವಾಗಿರುವ ಅಲೆವೂರಿನ ಕಟ್ಟೆ ಗಣಪತಿ ದೇವರಿಗೆ ಕೈ ಮುಗಿಯಲು ಹೋದಾಗ ನೂರಾರು ಜನ ಅಭಿಮಾನಿಗಳು ಮುಗಿ ಬಿದ್ದರು.

ತನ್ನ ಊರಿನ ಜನರಿಗೆ ಸೆಲ್ಫಿಗೆ ಪೋಸು ಕೊಟ್ಟ ನಟ ರಕ್ಷಿತ್ ಶೆಟ್ಟಿ, ಬಳಿಕ ಕಟ್ಟೆ ಗಣಪತಿಗೆ ವಿಶೇಷ ಪೂಜೆ ನಡೆಸಿದರು. ಈ ವೇಳೆ ಅರ್ಚಕರು ಪ್ರಾರ್ಥನೆ ನಡೆಸಿ ರಕ್ಷಿತ್ ಶೆಟ್ಟಿ ಭವಿಷ್ಯಕ್ಕೆ ಶುಭ ಕೋರಿದರು. ತವರಿನ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಕ್ಷಿತ್ ಶೆಟ್ಟಿ, ಅಲೆವೂರು ಭಾಗದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಕೆಲ ತಿಂಗಳ ಹಿಂದೆ ತಮ್ಮ ಮೂಲ ಮನೆಯ ದೈವದ ಆರಾಧನೆಯಲ್ಲೂ ರಕ್ಷಿತ್ ಭಾಗವಹಿಸಿದ್ದರು. ಕಟ್ಟೆ ಗಣಪತಿ ಸನ್ನಿಧಾನ ಈ ಭಾಗದ ಪ್ರಸಿದ್ಧ ತಾಣವಾಗಿದ್ದು ಕಳೆದ ಐದು ದಿನಗಳಿಂದ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿದೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ