ಸಿದ್ದರಾಮಯ್ಯನವರೇ ಇನ್ನು 10 ದಿನ ಉಳಿದಿದೆ: ನಿಮ್ಮ ಖುರ್ಚಿ ಅಲ್ಲಾಡುತ್ತಿದೆ… ಶಾಸಕ ಯಶ್ಪಾಲ್ ಸುವರ್ಣ ವ್ಯಂಗ್ಯ

ಉಡುಪಿ : ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಖುರ್ಚಿಯೇ ಈಗ ಅಲ್ಲಾಡುತ್ತಿದೆ. ಇನ್ನು ನಿಮಗೆ ಒಂಬತ್ತು ದಿನಗಳ ಕಾಲಾವಕಾಶ ಇದೆ. ಅಷ್ಟರ ಒಳಗೆ ಜನರ ವಿಶ್ವಾಸ ಗಳಿಸಿ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ವ್ಯಂಗ್ಯವಾಡಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನಿಮ್ಮದೇ ಸರಕಾರದ ಶಾಸಕರು ಮತ್ತು ಸಚಿವರು ಸರಕಾರ ಶೇಕ್ ಆಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಆಗಸ್ಟ್ 29 ತಾರೀಖಿನ ತನಕ ನಿಮಗೆ ಸಮಯ ಇದೆ. ರಾಜಕೀಯ ನಿವೃತ್ತಿ ಅಂಚಿನಲ್ಲಾದರೂ ಉಳಿದ ಅನುದಾನಗಳನ್ನು ಬಿಡುಗಡೆ ಮಾಡಿ. ದೇವರು ನಿಮಗೆ ಒಳ್ಳೆಯ ಬುದ್ಧಿ ಕೊಡಲಿ. ಇನ್ನಾದರೂ ಜನರ ವಿಶ್ವಾಸ ಗಳಿಸಿ ಎಂದು ಸಿಎಂ ಕಾಲೆಳೆದಿದ್ದಾರೆ.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ