ಭಾರತ್ ಸ್ಕೌಟ್ ಮತ್ತು ಗೈಡ್ಸ್  ಕರ್ನಾಟಕ, ಜಿಲ್ಲಾ ಸಂಸ್ಥೆ ಉಡುಪಿಯ ಮುಖ್ಯ ಆಯುಕ್ತರಾಗಿ ಶ್ರೀ ಇಂದ್ರಾಳಿ ಜಯಕರ್ ಶೆಟ್ಟಿ ಪದಗ್ರಹಣ

ಉಡುಪಿ : ಮಾನ್ಯ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್.ಸಿಂಧ್ಯಾ ಇವರ ಮಾರ್ಗದರ್ಶನ‌ದಿಂದ ಜಿಲ್ಲಾ ಮುಖ್ಯ ಆಯುಕ್ತರಾಗಿ (D.C.C.) ನೂತನವಾಗಿ ಶ್ರೀ ಇಂದ್ರಾಳಿ ಜಯಕರ್ ಶೆಟ್ಟಿರವರ ಪದಗ್ರಹಣ ಕಾರ್ಯಕ್ರಮವು, ಆದಿತ್ಯವಾರದಂದು ಡಾ|ವಿ.ಎಸ್. ಆಚಾರ್ಯ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಹಾಗೂ ಶಿಬಿರ ಕೇಂದ್ರ, ಪ್ರಗತಿನಗರ, ಮಣಿಪಾಲದಲ್ಲಿ ನಡೆಯಿತು.

ಈ ಪ್ರಯುಕ್ತ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಗಣಹೋಮ ನೆರವೇರಿಸುವುದರೊಂದಿಗೆ, ಜಿಲ್ಲಾ ಪದಾಧಿಕಾರಿಗಳ ಕಾರ್ಯಕಾರಿ ಸಭೆ ನಡೆಸಿ ಜಿಲ್ಲೆಯ ಪ್ರಗತಿಯು ಇನ್ನೂ ಮುಂದೆ ರಾಜ್ಯಕ್ಕೆ ಮಾದರಿಯಾಗುವ ಪಥದಲ್ಲಿ ನಾವೆಲ್ಲ ಒಂದಾಗಿ ಸಾಗೋಣ, ಸಂಸ್ಥೆ ಎಂದರೆ ಏರುಪೇರು, ಕುಂದು ಕೊರತೆ ಇದ್ದೇ ಇರುತ್ತದೆ. ಸಂಸ್ಥೆಯಲ್ಲಿ ಅದು ಸರಿ ಇಲ್ಲ, ಇದು ಸರಿ ಇಲ್ಲ, ಎನ್ನುವ ಮೊದಲು ನಾವೆಷ್ಟು ಸರಿ ಎಂದು ತಿಳಿದು, ನಾವು ಆತ್ಮ ಸಾಕ್ಷಿಯಿಂದ ಸೇವೆ ಮಾಡೋಣ. ಇದು ಒಂದು ಉನ್ನತ ಸಂಸ್ಥೆ ಎನ್ನುವ ಮುನ್ನುಡಿಯನ್ನು ಮಾನ್ಯ ಶ್ರೀ ಇಂದ್ರಾಳಿ ಜಯಕರ್ ಶೆಟ್ಟಿಯವರು ತಿಳಿಸಿದರು.

ಈ ಎಲ್ಲಾ ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಆಯುಕ್ತರಾದ ಪ್ರಭಾಕರ್ ಭಟ್, ಜಿಲ್ಲಾ ಸರ್ವ ಪದಾಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಸಾಕ್ಷಿಯಾದರು.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಕಾರು ಕಳವು ಗೈದ ಆರೋಪಿ ಪೊಲೀಸ್ ವಶಕ್ಕೆ