‘ಸೇವ್‌ ಅವರ್ ಸೋಲ್’ ಕಿರುಚಿತ್ರ ಅ.18 ರಂದು ಬಿಡುಗಡೆ

ಮಂಗಳೂರು : “ಅಪಘಾತ ಮತ್ತು ಅತ್ಯಾಚಾರದಂತಹ ಘಟನೆಗಳು ನಡೆದಾಗ ಮೊಬೈಲ್ ನೆಟ್ವರ್ಕ್ ಇಲ್ಲದಿದ್ದರೂ ಮೊಬೈಲ್ ಫೋನ್‌ನಲ್ಲಿರುವ ಫೀಚರ್ ಬಳಸಿ ನಾವು ನಮ್ಮ ಆತ್ಮೀಯರನ್ನು ಅಥವಾ ಪೊಲೀಸರನ್ನು ಹೇಗೆ ಸಂಪರ್ಕ ಮಾಡಬಹುದು ಎಂದು ಮಹತ್ವದ ಸಂದೇಶ ಸಾರುವ ಕಿರುಚಿತ್ರ ‘ಸೇವ್ ಅವರ್ ಸೋಲ್’ ಎಂಬ ಹೆಸರಿನಲ್ಲಿ ನಿರ್ಮಾಣಗೊಂಡಿದೆ.

ಎ.ಯು. ಕ್ರಿಯೇಶನ್ಸ್ ಮತ್ತು ದ.ಕ.ಜಿಲ್ಲಾ ಪೊಲೀಸ್ ಘಟಕದ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಈ ಕಿರುಚಿತ್ರದ ಬಿಡುಗಡೆ ಎ.ಯು. ಕ್ರಿಯೇಶನ್ಸ್ ಯೂ ಟ್ಯೂಬ್‌ನಲ್ಲಿ ಅ.18ರಂದು ಸಂಜೆ ನಡೆಯಲಿದೆ“ ಎಂದು ನಿರ್ಮಾಪಕ ಯು.ಜಿ. ರಾಘವ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಎ.ಯು. ಕ್ರಿಯೇಶನ್ಸ್ ಮುಖ್ಯಸ್ಥ ಅಚಲ್ ಉಬರಡ್ಕ ಅವರು ‘ಸೇವ್ ಅವರ್ ಸೋಲ್’ ಕಿರುಚಿತ್ರದ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಮತ್ತು ಎಡಿಟಿಂಗ್ ಮಾಡಿದ್ದು ಗುರುಮೂರ್ತಿ ಅಮ್ಮಣ್ಣಾಯ ಮತ್ತು ರತ್ನ ಸಿಂಚನ ಅವರು ಸಹನಿರ್ದೇಶಕರಾಗಿದ್ದಾರೆ. ಉಪ್ಪಿನಂಗಡಿಯ ಸರ್ಗಂ ಸ್ಟುಡಿಯೋಸ್‌ನ ಸಾತ್ವಿಕ್ ಪಡಿಯಾ‌ರ್ ಸಂಗೀತ ನೀಡಿದ್ದು ಪ್ರಸಾದ್ ಕೊಯಿಲ ಮೇಕಪ್ ಆರ್ಟಿಸ್ಟ್ ಆಗಿದ್ದಾರೆ. ಅನೀಶ್ ಗಾಣಿಗ, ಕಿಶೋರ್ ಜೋಗಿ, ಅನುಷಾ ಜೋಗಿ ಪುರುಷರಕಟ್ಟೆ, ಅಚಲ್ ಉಬರಡ್ಕ, ಗುರುಮೂರ್ತಿ ಅಮ್ಮಣ್ಣಾಯ, ವಿಲ್ಮಾ, ಲಲಿತಾ ಸಿಸ್ಟರ್, ದಿವಾಕರ ಸುರ್ಯ, ರಾಜೇಶ್ ಶಾಂತಿನಗರ, ರಾಜಶೇಖರ ಶಾಂತಿನಗರ, ಸಂದೀಪ್ ಆಚಾರ್ಯ, ಪ್ರಕಾಶ್ ಆಚಾರ್ಯ, ಜಯರಾಮ ಆಚಾರ್ಯ, ನವೀನ್ ಕುಲಾಲ್, ಕಿಶೋರ್ ನೀರಕಟ್ಟೆ, ಚಂದ್ರಶೇಖರ ಶೆಟ್ಟಿ ಮತ್ತಿತರರು ತಾರಾಗಣದಲ್ಲಿದ್ದಾರೆ.

ಎ.ಯು. ಕ್ರಿಯೇಶನ್ಸ್‌ನ ಪರಿಚಯ :
ಅಚಲ್ ಉಬರಡ್ಕ ಅವರ ಮುಂದಾಳತ್ವದ ಎ.ಯು. ಕ್ರಿಯೇಶನ್ಸ್ ಈಗಾಗಲೇ ಹಲವು ಕಿರುಚಿತ್ರಗಳನ್ನು ನಿರ್ಮಿಸಿ ಯಶಸ್ವಿಯಾಗಿದೆ. ಮೊದಲ ಕಿರುಚಿತ್ರ ಮೌನ. ಇದು ಪುತ್ತೂರಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಅಚಲ್ ಉಬರಡ್ಕ ಅವರು ವಿಧ್ಯಾಭ್ಯಾಸ ಮಾಡುವ ಸಮಯದಲ್ಲಿ ವಿದ್ಯಾರ್ಥಿಗಳು ಸೇರಿ ಮಾಡಿರುವ ಕಿರುಚಿತ್ರ. ಇದಕ್ಕೆ ರಾಷ್ಟ್ರ ಮಟ್ಟದ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ.

ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಅಚಲ್, ಅನಿಶ್ ಗಾಣಿಗ, ಗುರುಮೂರ್ತಿ ಅಮ್ಮಣ್ಣಾಯ ಉಪಸ್ಥಿತರಿದ್ದರು.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್