ಬಿರುಗಾಳಿಗೆ ಹಾರಾಡಿದ ಅಂಗಡಿ ಮೇಲ್ಛಾವಣಿ ಶೀಟುಗಳು – ವೀಡಿಯೋ ವೈರಲ್

ಬಂಟ್ವಾಳ : ಇಲ್ಲಿನ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಬಳಿ ಶನಿವಾರ ಬೆಳಗ್ಗೆ ಬೀಸಿದ ಬಿರುಗಾಳಿಗೆ ಅಂಗಡಿ – ಮುಂಗಟ್ಟುಗಳ ಮೇಲ್ಛಾವಣಿ ತಗಡುಶೀಟುಗಳು ಹಾರಿಹೋಗಿರುವ ಘಟನೆ ನಡೆದಿದೆ.

ಶನಿವಾರ ಬೆಳಗ್ಗೆ ಸುಮಾರು 9.30ರ ವೇಳೆಗೆ ಜೋರಾಗಿ ಬಿರುಗಾಳಿ ಬೀಸಿದೆ. ಈ ವೇಳೆ ಖಾದರ್ ಇಕ್ರಾ ಎಂಬವರಿಗೆ ಸೇರಿರುವ ಅಂಗಡಿಗೆ ಅಳವಡಿಸಿರುವ ಶೀಟ್‌ಗಳು ಹಾರಿ ಹೋಗಿದೆ. ಅದರ ವೀಡಿಯೋ ಸ್ಥಳೀಯರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿವೆ. ಆದರೆ ಘಟನೆಯಲ್ಲಿ ಯಾವುದೇ ರೀತಿಯ ಸಾವುನೋವುಗಳು ಸಂಭವಿಸಿಲ್ಲ.

Related posts

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ

ಬಪ್ಪನಾಡು ಶ್ರೀದುರ್ಗಾಪರಮೇಶ್ವರಿ ದೇವಿಗೆ ಭಕ್ತರಿಂದ 1.5 ಲಕ್ಷ ಚೆಂಡು ಮಲ್ಲಿಗೆ ಸಮರ್ಪಣೆ