ಕಾರಂತರು ಕೇವಲ ಒಂದು ಧರ್ಮ ಅಥವಾ ಜಾತಿಯ ಪರವಾಗಿರದೆ, ಸರ್ವ ಸಮಾಜದ ಸಮಸ್ಯೆಗಳಿಗೆ ತನ್ನ ಕೃತಿಗಳ ಮೂಲಕ ನ್ಯಾಯ ಒದಗಿಸಲು ಪ್ರಯತ್ನಿಸಿದವರು ಎಂದು ಹಿರಿಯ ಸಾಹಿತಿ, ಕವಿ, ಚಿಂತಕ ಡಾ. ನಾ. ಮೊಗಸಾಲೆ ಹೇಳಿದರು.
ಸಾಲಿಗ್ರಾಮ ಗಿರಿಜಾ ಕಲ್ಯಾಣ ಮಂಟಪದಲ್ಲಿ ನಡೆದ ಗೆಳೆಯರ ಬಳಗ(ರಿ)ಕಾರ್ಕಡ ಸಾಲಿಗ್ರಾಮ ಇವರು, ಕೋಟ ಶಿವರಾಮ ಕಾರಂತರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ನೀಡುವ ಕಾರಂತ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು ಸಾಹಿತ್ಯದ ಜೊತೆಗೆ ಸಿನಿಮಾ, ರಾಜಕೀಯ, ವೈದ್ಯಕೀಯ, ವಿಜ್ಞಾನ, ಯಕ್ಷಗಾನ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತನ್ನ ಪ್ರಾವಿಣ್ಯತೆ ಮೆರೆದವರು ಎಂದರು ಹೇಳಿದರು.
ಕರ್ನಾಟಕ ಬ್ಯಾಂಕ್ ಸ್ವಸ್ತಿಕ್ ಚಿಹ್ನೆಯನ್ನು ರಚಿಸಿ ಕೊಟ್ಟ ಶಿವರಾಮ್ ಕಾರಂತರಿಗೆ ನಮ್ಮ ಕರ್ಣಾಟಕ ಬ್ಯಾಂಕ್ ಅಭಾರಿಯಾಗಿದ್ದು, ಅವರ ಅಂದಿನ ಮಾರ್ಗದರ್ಶನದಿಂದ ಇಂದು ನಮ್ಮ ಬ್ಯಾಂಕ್ ಭಾರತದಲ್ಲಷ್ಟೆ ಅಲ್ಲದೇ ವಿಶ್ವದಾದ್ಯಂತ ಶಾಖೆ ಹೊಂದಿರುತ್ತದೆ ಎನ್ನುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಸಭಾ ಕಾರ್ಯಕ್ರಮದ, ಉದ್ಘಾಟನಾ ಭಾಷಣದಲ್ಲಿ ವಾದಿರಾಜ್ ಕೆ. ನುಡಿದರು.
ಅಧ್ಯಕ್ಷತೆ ಹರಿಕೃಷ್ಣ ಪುನನೂರು, ಮಾಜೀ ಅಧ್ಯಕ್ಷರು ಕನ್ನಡ ಸಾಹಿತ್ಯ ಮತ್ತು ಪರಿಷತ್, ವಾದಿರಾಜ್ ಕೆ. ಸಹಾಯಕ ಪ್ರಭಂದಕರು ಕರ್ಣಾಟಕ ಬ್ಯಾಂಕ್, ಪುಷ್ಪ ನಮನ ಕಾರ್ಯಕ್ರಮವನ್ನು ಪ್ರದೀಪ್ ಕುಮಾರ್ ಕಲ್ಕೂರ್, ಕಾರಂತ ಸಂಸ್ಮರಣೆಯನ್ನು ಪೂರ್ಣಿಮಾ ಕೊಡವೂರು ನೆರವೇರಿಸಿದರು.
ಉದ್ಯಮಿ ಆನಂದ ಸಿ ಕುಂದರ್, ಕರ್ನಾಟಕ ಯಕ್ಷಗಾನ ಅಕಾಡಮಿ ಅಧ್ಯಕ್ಷರಾದ ತಲ್ಲೂರು ಶಿವರಾಮ್ ಶೆಟ್ಟಿ, ಸಿ ಸುರೇಶ್ ತುಂಗ, ನೀಲಾವರ ಸುರೇಂದ್ರ ಅಡಿಗ, ಡಾ. ಕೃಷ್ಣ ಕಾಂಚನ್, ಅಧ್ಯಕ್ಷರು ಕೋಟ ವ್ಯವಸಾಯಕ ಸೇವಾ ಸಹಕಾರಿ ಸಂಘ, ಎಚ್ ಜನಾರ್ಧನ್ ಹಂದೆ ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಸುಕನ್ಯ ಸೋಮಯಾಜಿ, ಕಾರ್ಯಕ್ರಮದ ನಿರೂಪಣೆಯನ್ನು ಶಶಿಧರ ಮಯ್ಯ ಮತ್ತು ಕೆ ಶೀನ ಧನ್ಯವಾದ ಸಮರ್ಪಿಸಿದರು.
ಕಾರ್ಯಕ್ರಮದ ಮುನ್ನ ಕೆ ಚಂದ್ರಕಾಂತ್ ನಾಯರಿ ಹಾಗೂ ಸ್ಥಳೀಯ ಪ್ರತಿಭೆಗಳಿಂದ ಗಾನ ನಮನ ಹಾಗೂ ನೃತ್ಯ ವೈವಿಧ್ಯ ಕಾರ್ಯಕ್ರಮ ಜರಗಿತ್ತು. ಸಭಾ ಕಾರ್ಯಕ್ರಮದ ನಂತರ ನಿಲ್ಕೋಡು ಶಂಕರ ಹೆಗ್ಡೆ ಸಂಯೋಜಿತ, ಮೆಕ್ಕೆಕಟ್ಟು ಮೇಳದವರಿಂದ ಪಾರಿಜಾತ-ನಾರಾಕಾಸುರ ಎನ್ನುವ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು.