2000 ಮಂಗಳಮುಖಿಯರು ನಟಿಸಿದ ಶಿವಲೀಲಾ ಸಿನಿಮಾ 6 ಭಾಷೆಯಲ್ಲಿ ತಯಾರು!

ಮಂಗಳೂರು : ಮಂಗಳಮುಖಿಯರ ಹೊಂದಿದ ಕತೆಯನ್ನು ‘ಶಿವಲೀಲಾ’ ಸಿನೆಮಾದ ಚಿತ್ರೀಕರಣ 80 ಶೇಕಡ ಪೂರ್ಣಗೊಂಡಿದೆ. ಮಂಗಳೂರಿನಲ್ಲಿ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ ಚಿತ್ರದ ಸಹ ನಿರ್ಮಾಪಕಿ ಮಂಗಳಮುಖಿ ಹನಿ ಮಂಗಳೂರು ತಿಳಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಸಿನೆಮಾದಲ್ಲಿ ಮೊದಲಬಾರಿಗೆ 2,000ಕ್ಕೂ ಅಧಿಕ ಮಂಗಳಮುಖಿಯರು ಕಾಣಿಸಿಕೊಳ್ಳಲಿದ್ದಾರೆ. ನಕಲಿ – ಅಸಲಿ – ಮಂಗಳಮುಖಿಯರ ಕತೆ ಚಿತ್ರದಲ್ಲಿದೆ. ತುಳು ಭಾಷೆ ಸಹಿತ ಇತರ ಐದು ಭಾಷೆಗಳಲ್ಲಿ ಸಿನೆಮಾ ತರುವ ಉದ್ದೇಶವಿದೆ. ಚಿತ್ರವನ್ನು ಅಶೋಕ್ ಜಯರಾಮ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪದ್ಮಶ್ರೀ ಜೋಗತಿ ಮಂಜಮ್ಮ ಸೇರಿದಂತೆ ಹಲವಾರು ಮಂದಿ ಕನ್ನಡದ ಕಲಾವಿದರಿದ್ದಾರೆ ಎಂದರು.

ಚಿತ್ರತಂಡದ ಮಂಗಳಮುಖಿ ಪವಿತ್ರಾ, ರಾಶಿ, ಚಿತ್ರದ ನಟ ದಚ್ಚು ದಿವಾಕರ್, ಖಳನಟ ಧನುಷ್‌ಕುಮಾರ್ ಶೆಟ್ಟಿ ಅಜ್ಜರ್ ಮಂಗಳೂರು, ಲಿಜೋ ಥೋಮಸ್‌ ಉಪಸ್ಥಿತರಿದ್ದರು.

Related posts

ಮಣಿಪಾಲ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಮಹೇಶ್ ಪ್ರಸಾದ್

ಕುಡಿಯುವ ನೀರಿನ ತುರ್ತು ನಿರ್ವಹಣೆಗೆ ಅನುದಾನ ನೀಡಿ : ಸರ್ಕಾರಕ್ಕೆ ಗಂಟಿಹೊಳೆ ಮನವಿ

ಚಲಿಸುತ್ತಿದ್ದ ಕಾರಿನ ಮೇಲೆ ಮುರಿದು ಬಿದ್ದ ಮರ