ಶಿರೂರು ಗುಡ್ಡ ಕುಸಿತ ಪ್ರಕರಣ – ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡಕ್ಕೆ ಬುಲಾವ್

ಉಡುಪಿ : ಉತ್ತರಕನ್ನಡದ ಶಿರೂರಿನಲ್ಲಿ ಮಣ್ಣು ಕುಸಿತ ದುರ್ಘಟನೆಯಲ್ಲಿ ಲಾರಿ ಸಮೇತ ನಾಪತ್ತೆಯಾಗಿದ್ದ ಚಾಲಕನ ಹುಡುಕಾಟಕ್ಕಾಗಿ ಮುಳುಗುತಜ್ಞ ಆಪದ್ಭಾಂಧವ ಈಶ್ವ‌ರ್ ಮಲ್ಪೆ ಮತ್ತು ತಂಡ ಶಿರೂರಿಗೆ ತೆರಳಲಿದೆ.

ಶಿರೂರು ದುರಂತದಲ್ಲಿ ಈವರೆಗೆ 8 ಜನರ ಮೃತದೇಹ ಪತ್ತೆಯಾಗಿದೆ. ಲಾರಿ ಜೊತೆಗೆ ಚಾಲಕ ಅರ್ಜುನ್ ಮತ್ತು ಇತರ ಇಬ್ಬರು ವ್ಯಕ್ತಿಗಳ ಪತ್ತೆ ಇನ್ನೂ ಆಗಿಲ್ಲ.ಇದೀಗ ಲಾರಿ ಇದೆ ಎಂದು ಶಂಕಿಸಲಾದ ಸ್ಥಳದಲ್ಲಿ ಲಾರಿ ಇರುವಿಕೆಯನ್ನು ಖಾತ್ರಿ ಪಡಿಸಲು ಮತ್ತು ಲಾರಿ ಒಳಗಡೆ ಇರುವ ಚಾಲಕ ಅರ್ಜುನ್‌ನನ್ನು ಹೊರತೆಗೆಯಲು ಮಲ್ಪೆ ಆಪತ್ಭಾಂಧವ ಈಶ್ವ‌ರ್ ಮಲ್ಪೆಯವರಿಗೆ ಪೊಲೀಸ್‌ ಇಲಾಖೆಯ ಅಧಿಕಾರಿಗಳಿಂದ ಕರೆ ಬಂದಿದೆ.

ಈಶ್ವರ್ ಮಲ್ಪೆ ಮತ್ತು ತಂಡ ಮಲ್ಪೆಯಿಂದ ಹೊರಟು ಶಿರೂರಿನಲ್ಲಿ ಅವಘಡ ನಡೆದ ಸ್ಥಳಕ್ಕೆ ತಲುಪಿ ಕಾರ್ಯಾಚರಣೆಯನ್ನು ಆರಂಭಿಸಲಿದೆ ಎಂದು ತಿಳಿದು ಬಂದಿದೆ.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ