ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಶಾಹುಲ್ ಹಮೀದ್ ನೇಮಕ

ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ನ್ಯಾಯವಾದಿ ಶಾಹುಲ್ ಹಮೀದ್ ರೆಹಮಾನ್ ಅವರನ್ನು ನೇಮಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಈ ಆದೇಶವನ್ನು ಹೊರಡಿಸಿದೆ. ದಿವಂಗತ ಕೆ. ಅಬ್ದುಲ್ ರಹಿಮಾನ್ ಮತ್ತು ನೆಬಿಸಾ ದಂಪತಿಯ ಪುತ್ರನಾದ ನ್ಯಾಯವಾದಿ ಶಾಹುಲ್ ಹಮೀದ್ ರೆಹಮಾನ್, ಮಂಗಳೂರು ಎಸ್‌‌ಡಿಎಂ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡಿದ್ದಾರೆ.

ಇವರು ಮಾಜಿ ಅಡ್ವೊಕೇಟ್ ಜನರಲ್ ಶ್ರೀ ಬಿ.ವಿ. ಆಚಾರ್ಯ ಅವರ ಬಳಿ ವಕೀಲರಾಗಿ ಅಭ್ಯಾಸ ಮಾಡಿದ್ದರು.

Related posts

ಕುತ್ತಾರುವಿನ ಕೊರಗಜ್ಜನ ಆದಿ ಕ್ಷೇತ್ರಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಭೇಟಿ

ನವಜಾತ ಶಿಶುಗಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸಿ : ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಸೂಚನೆ

ಡಿಸೆಂಬರ್ 6ರಂದು ವಿಪಕ್ಷ ನಾಯಕ ಆರ್. ಅಶೋಕ್ ಉಡುಪಿಗೆ