ಎನ್ಎಂಪಿಎಗೆ ಬಂದಿಳಿದ ಈ ಋತುವಿನ ಎರಡನೇ ಐಷಾರಾಮಿ ಹಡಗು ‘ಸೆವೆನ್ ಸೀಸ್‌ ವೊಯೇಜರ್’

ಮಂಗಳೂರು : ಈ ಋತುವಿನ ಎರಡನೇ ಐಷಾರಾಮಿ ಬಹೇಮಿಯನ್ ಪ್ರವಾಸಿ ಹಡಗು ‘ಸೆವೆನ್ ಸೀಸ್‌ ವೊಯೇಜರ್’ ನವ ಮಂಗಳೂರು ಬಂದರಿಗೆ ಶುಕ್ರವಾರ ತಲುಪಿದೆ.

ನಾರ್ವೆಯ ಕ್ರೂಸ್‌ಲೈನ್‌ನ ಈ ಹಡಗು ಕೊಚ್ಚಿಗೆ ತೆರಳುವ ಮಾರ್ಗಮಧ್ಯೆ ಶುಕ್ರವಾರ ಬೆಳಗ್ಗೆ 6.30ಕ್ಕೆ ನವಮಂಗಳೂರು ಬಂದರಿಗೆ ತಲುಪಿತ್ತು. ಈ ಐಷಾರಾಮಿ ಹಡಗು 650 ಪ್ರಯಾಣಿಕರು ಹಾಗೂ 450 ಸಿಬ್ಬಂದಿಯನ್ನು ಹೇರಿಕೊಂಡು ಆಗಮಿಸಿತ್ತು.

ಪ್ರವಾಸಿಗರನ್ನು ಭಾರತೀಯ ಸಂಪ್ರದಾಯದಂತೆ ಸ್ವಾಗತಿಸಲಾಯಿತು. ಬಳಿಕ ಹಡಗಿನಲ್ಲಿ ಆಗಮಿಸಿದ ವಿದೇಶಿ ಪ್ರಯಾಣಿಕರು ಸ್ಥಳೀಯ ಪ್ರಮುಖ ತಾಣಗಳಾದ ಕಾರ್ಕಳದ ಬಾಹುಬಲಿ, ಮೂಡುಬಿದಿರೆಯ ಸಾವಿರ ಕಂಬದ ಬಸದಿ, ಸೋನ್ಸ್ ಫಾರ್ಮ್, ಕಲ್ಬಾವಿ ಗೋಡಂಬಿ ಕಾರ್ಖಾನೆ, ಗೋಕರ್ಣನಾಥ ದೇವಸ್ಥಾನ ಹಾಗೂ ಸ್ಥಳೀಯ ಮಾರುಕಟ್ಟೆಗೆ ಪ್ರವಾಸಿಗರು ಭೇಟಿ ನೀಡಿದರು. ಬಳಿಕ ಈ ಹಡಗು ಫುಝರ್‌ನಿಂದ ಮುಂಬೈ, ಗೋವಾ, ಮಂಗಳೂರು, ಕೊಚ್ಚಿಯ ಮೂಲಕ ಕೊಲಂಬೊಗೆ ಶುಕ್ರವಾರ ಸಂಜೆ 5.30ಕ್ಕೆ ವಾಪಸ್ ಆಗಿದೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ