ಮೂರು ದಿನಗಳಿಂದ ಯೋಗೀಶ್‌ಗಾಗಿ ಸಮುದ್ರದಲ್ಲಿ ಶೋಧಕಾರ್ಯ

ಕುಂದಾಪುರ : ತಾಲೂಕಿನ ಬೀಜಾಡಿಯಲ್ಲಿ ಕಡಲ ಅಲೆಗಳ ರಭಸಕ್ಕೆ ಸಿಕ್ಕು ಸಮುದ್ರಪಾಲಾದ ತುಮಕೂರು ತಿಪಟೂರು ಮೂಲದ ಟಿ.ಆ‌ರ್ ಯೋಗೀಶ್ (23) ಎನ್ನುವ ಯುವಕನ ಮೃತದೇಹ ಮೂರು ದಿನ ಕಳೆದರೂ ಸಿಕ್ಕಿಲ್ಲ. ಆತನಿಗಾಗಿ ಸ್ಥಳೀಯ ಮೀನುಗಾರರು ಹುಡುಕಾಟ ನಡೆಸುತ್ತಲೇ ಇದ್ದಾರೆ.

ಕುಂದಾಪುರದ ಗೋಪಾಡಿ-ಬೀಜಾಡಿಯ ಸ್ನೇಹಿತನ ಮನೆಯ ವಿವಾಹ ಕಾರ್ಯಕ್ರಮಕ್ಕೆಂದು ಯೋಗೀಶ್ ಮತ್ತು ಸ್ನೇಹಿತ ಸಂದೀಪ್ ಬಂದಿದ್ದರು. ಮರುದಿನ ಮದುವೆ ಕಾರ್ಯಕ್ರಮ ಇತ್ತು. ಹಿಂದಿನ ದಿನ ಯೋಗೀಶ್ ತನ್ನ ಸ್ನೇಹಿತ ಸಂದೀಪ್ ಜೊತೆಗೂಡಿ ಸಮುದ್ರ ವಿಹಾರಕ್ಕೆ ತೆರಳಿದ್ದ ವೇಳೆ ದುರ್ಘಟನೆ ಸಂಭವಿಸಿತ್ತು. ಸಂದೀಪ್ ನೀರಲ್ಲಿ ಮುಳುಗುತ್ತಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ ಯೋಗೀಶ್ ಅಲೆಗಳ ರಭಸಕ್ಕೆ ನೀರುಪಾಲಾಗಿ ನಾಪತ್ತೆಯಾಗಿದ್ದ. ಗುರುವಾರ ಬೆಳಿಗ್ಗಿನಿಂದಲೂ ಮೀನುಗಾರರು, ಪೊಲೀಸರು, ಕರಾವಳಿ ಕಾವಲು ಪಡೆಯವರು, ಸ್ಥಳೀಯರು ಸತತ ಹುಡುಕಾಟ ನಡಸಿದರೂ ಕೂಡ ಕಡಲು ಪ್ರಕ್ಷುಬ್ಧಗೊಂಡಿದ್ದು ಅಲೆಗಳು ಹೆಚ್ಚಿದ ಕಾರಣ ಯುವಕನ ಸುಳಿವು ಪತ್ತೆಯಾಗಿಲ್ಲ.

ಸದ್ಯ ಗಂಗೊಳ್ಳಿಯ ಮುಳುಗು ತಜ್ಞ ದಿನೇಶ್ ಖಾರ್ವಿ ನೇತೃತ್ವದಲ್ಲಿ ಹುಡುಕಾಟ ನಡೆಸುತ್ತಿದ್ದರೂ ಯೋಗೀಶ್ ಪತ್ತೆಯಾಗಿಲ್ಲ. ಸಮುದ್ರದ ಒತ್ತಡಕ್ಕೆ ದೇಹ ಬೈಂದೂರು ಅಥವಾ ಭಟ್ಕಳದತ್ತ ತೇಲಿ ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ