ಸಮೃದ್ಧ ಮೀನುಗಾರಿಕೆಗಾಗಿ ಮೀನುಗಾರರಿಂದ ಸಮುದ್ರಪೂಜೆ; ಮತ್ಸ್ಯ ಸಂಪತ್ತಿಗಾಗಿ ಪ್ರಾರ್ಥನೆ, ಹಾಲಿನ ಅಭಿಷೇಕ

ಉಡುಪಿ : ಈ ವರ್ಷದ ಮೀನುಗಾರಿಕೆ ಋತು ಈಗಾಗಲೇ ಪ್ರಾರಂಭಗೊಂಡಿದೆ‌. ಆಗಸ್ಟ್ ಒಂದಕ್ಕೆ ಅಧಿಕೃತವಾಗಿ ಮೀನುಗಾರಿಕೆ ಪ್ರಾರಂಭಗೊಂಡಿದ್ದರೂ ಕೂಡ ಕೆಲವು ಕಾರಣಗಳಿಂದ ತಡವಾಗಿ ಮೀನುಗಾರಿಕೆ ಶುರುವಾಗಿದೆ. ಆಗಸ್ಟ್ 15ರ ನಂತರ ಮೀನುಗಾರಿಕೆ ವೇಗ ಪಡೆದುಕೊಂಡಿದ್ದು ಇದೀಗ ಮೀನು ಪ್ರಿಯರಿಗೆ ಸಾಕಷ್ಟು ಮೀನುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಇಂದು ಮೀನುಗಾರರು ಸಮುದ್ರ ರಾಜನಿಗೆ ವಿಶೇಷ ಪೂಜೆ ಸಲ್ಲಿಸಿ ಸಮೃದ್ಧ ಮೀನುಗಾರಿಕೆಗಾಗಿ ಪ್ರಾರ್ಥನೆ ನಡೆಸಿದರು. ಸಮುದ್ರರಾಜನಿಗೆ ಸಿಯಾಳ ಅಭಿಷೇಕ ಮಾಡಿದರು.

ಕೈಪುಂಜಾಲು ಮೊಗವೀರ ಮಹಾಸಭಾದ ಮೀನುಗಾರರು ಸಮುದ್ರ ಪೂಜೆಯನ್ನು ಆಯೋಜಿಸಿದ್ದರು. ಕೈಪುಂಜಾಲು ಮೊಗವೀರ ಗ್ರಾಮಸಭೆಯ ಸದಸ್ಯರು ಹಾಲು ಹಾಗೂ ಸಿಯಾಳವನ್ನ ಊರಿನ ಶ್ರೀ ಪಾಂಡುರಂಗ ಭಜನಾ ಮಂದಿರದಲ್ಲಿ ಸಂಗ್ರಹಿಸಿ ಶ್ರೀ ಪಾಂಡುರಂಗ ರುಕ್ಮಿಣಿದೇವರಿಗೆ ಪ್ರಾರ್ಥನೆ ಸಲ್ಲಿಸಿ ಭಜನಾ ಸಂಕೀರ್ತನೆಯೊಂದಿಗೆ ಸಮುದ್ರಕ್ಕೆ ತೆರಳಿದರು. ಬಳಿಕ ಹೇರಳ ಮತ್ಸ್ಯ ಸಂಪತ್ತನ್ನು ಕರುಣಿಸುವಂತೆ ಪ್ರಾರ್ಥಿಸಿದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು