ಪಡುಬಿದ್ರಿಯಲ್ಲಿ ಕಡಲ ಆರ್ಭಟಕ್ಕೆ ಮೀನುಗಾರರ ಶೆಡ್, ತೆಂಗಿನ ಮರಗಳು ಕಡಲುಪಾಲು

ಪಡುಬಿದ್ರಿ : ಮೀನುಗಾರರ ಬಹುದಿನಗಳ ಮನವಿಗೆ ಪೂರಕವಾಗಿ ಸ್ಪಂದನೆ ದೊರಕದ ಹಿನ್ನಲೆಯಲ್ಲಿ, ಇದೀಗ ಮೀನುಗಾರಿಕಾ ಸಲಕರಣೆ ಕೊಠಡಿ ಸಹಿತ ಮೂರು ತೆಂಗಿನ ಮರಗಳು ಕಡಲ ಒಡಲು ಸೇರಿದ್ದು, ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ದಿನಗಳಿಂದ ಪಡುಬಿದ್ರಿ ನಡಿಪಟ್ಣದಲ್ಲಿ ಮೀನುಗಾರಿಕಾ ಸಲಕರಣೆಗಳನ್ನು ಶೇಖರಣೆ ಮಾಡಲಾಗುತ್ತಿದ್ದ ಬೃಹತ್ ಶೆಡ್ಡ್ ಇದ್ದ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರಗೊಂಡಿತ್ತು. ಈ ಬಗ್ಗೆ ಜಿಲ್ಲಾಡಳಿತ ಸಹಿತ ಸ್ಥಳೀಯ ರಾಜಕಾರಣಿಗಳ ಗಮನಕ್ಕೆ ತರಲಾಗಿದ್ದು, ಸ್ಥಳಕ್ಕೆ ಬಂದ ಉಡುಪಿ ಜಿಲ್ಲಾಧಿಕಾರಿ ತಾತ್ಕಾಲಿಕವಾಗಿ ಕಡಲ್ಕೊರೆತ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಸರಿಯಾದ ಹೊತ್ತಲ್ಲಿ ಸಾಕಷ್ಟು ತಡೆಗೋಡೆ ಕಲ್ಲುಗಳನ್ನು ಈ ಭಾಗಕ್ಕೆ ಹಾಕದೆ ಇದ್ದ ಪರಿಣಾಮ ಶೆಡ್ಡಿನ ಒಂದು ಗೋಡೆ ಕಡಲು ಪಾಲಾಗಿದೆ. ಇದರೊಂದಿಗೆ ಈ ಭಾಗದ ಮೂರು ತೆಂಗಿನ ಮರಗಳನ್ನೂ ಕಡಲು ತನ್ನೊಡಲಿಗೆ ಸೇರಿಸಿಕೊಂಡಿದೆ.

ಇದೀಗ ಮೀನುಗಾರಿಕಾ ರಸ್ತೆಗೂ ಅಪಾಯ ಸಂಭವಿಸುವ ಸಾಧ್ಯತೆ ಇದೆ‌. ಇನ್ನೂ ಕಾಲ ಮಿಂಚಿಲ್ಲ, ಸೂಕ್ತ ಕ್ರಮ ಕೈಗೊಂಡರೆ ಮುಂದೆ ಸಂಭವಿಸಬಹುದಾದ ಭಾರೀ ಅನಾಹುತಗಳನ್ನು ತಪ್ಪಿಸಲು ಸಾಧ್ಯವಿದೆ ಎಂದು ಮೀನುಗಾರ ಮುಖಂಡ ಶಂಕರ್ ಬಂಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ