ಭಯೋತ್ಪಾದನಾ ದಾಳಿ ಖಂಡಿಸಿ SDPI ಉಡುಪಿ ಜಿಲ್ಲೆ ವತಿಯಿಂದ ಜಿಲ್ಲೆಯಾದ್ಯಂತ ಕ್ಯಾಂಡಲ್ ಲೈಟ್ ಮಾರ್ಚ್

ಉಡುಪಿ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಖಂಡಿಸಿ ಹಾಗೂ ಮೃತರಾದ ಅಮಾಯಕರಿಗೆ ಸಂತಾಪ ಸೂಚಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಕಾಪು ಪೇಟೆ, ಉಡುಪಿಯ ಅಜ್ಜರಕಾಡು ಹುತಾತ್ಮರ ಸ್ಮಾರಕ, ಗಂಗೊಳ್ಳಿ ಹಾಗೂ ಕಂಡ್ಲೂರಿನಲ್ಲಿ ಕ್ಯಾಂಡಲ್ ಲೈಟ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.

ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ SDPI ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಶಾಹಿದ್ ಆಲಿ ಈ ಭಯೋತ್ಪಾದನಾ ಕೃತ್ಯವನ್ನು ನಾವು ಖಂಡಿಸುತ್ತಿದ್ದೇವೆ ಹಾಗೂ ಈ ಘಟನೆಗೆ ಸಂಬಂಧಿಸಿ ನಿಷ್ಪಕ್ಷಪಾತ ತನಿಖೆಯಾಗಬೇಕು ಹಾಗೂ ಇದರ ಹಿಂದೆ ಇರುವ ಷಡ್ಯಂತರವನ್ನು ಬಯಲಿಗೆಳೆಯಬೇಕು. ಅಪರಾಧಿಗಳಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಹಾಗೂ ಕ್ಷೇತ್ರ ಸಮಿತಿ ನಾಯಕರು ಭಾಗವಹಿಸಿದ್ದರು.

Related posts

ರೈಲ್ವೆ ನಿಲ್ದಾಣದಿಂದಲೇ ಬೈಕ್ ಕದ್ದ ಯುವಕರು; ಕಳ್ಳತನ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ಇಸ್ರೋ ಮಾಜಿ ಅಧ್ಯಕ್ಷ ಕಸ್ತೂರಿ ರಂಗನ್ ನಿಧನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಂತಾಪ

ನಿಡ್ಡೋಡಿಯ ಮಹಿಳೆ ಕೊಲೆ ಪ್ರಕರಣ : ಆರೋಪಿ ಖುಲಾಸೆ