ಸ್ಪೇಸ್ ಸ್ಟೇಷನ್‌ನಿಂದ ಭೂಮಿಗೆ ಬಂದ ವಿಜ್ಞಾನಿಗಳು – ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಭ್ರಮಾಚರಣೆ

ಉಡುಪಿ : ಸ್ಪೇಸ್ ಸ್ಟೇಷನ್‌ನಲ್ಲಿ ನಿಗದಿಯಾದ ಎಂಟು ದಿನದ ಬದಲು 286 ದಿನ ಬಾಕಿಯಾಗಿ ಹರಸಾಹಸ ಪಟ್ಟು ಭೂಮಿ ಮೇಲೆ ವಾಪಸಾದ ಹಿರಿಯ ವಿಜ್ಞಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಗೆ ಉಡುಪಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು.

ನಗರದ ನೇತ್ರ ಜ್ಯೋತಿ ಕಾಲೇಜಿನಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಸಂಭ್ರಮಾಚರಣೆಯನ್ನು ಮಾಡಿತು. ನೂರಾರು ವಿದ್ಯಾರ್ಥಿನಿಯರು ಸುನಿತಾ ವಿಲಿಯಮ್ಸ್ ಅವರ ಭಾವಚಿತ್ರ ಹಿಡಿದು ಶುಭ ಕೋರಿದರು. ಕಾಲೇಜಿನ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಈ ಸಾಧನೆಯನ್ನು ಸಂಭ್ರಮಿಸಲಾಯಿತು.

ಹಿರಿಯ ಭೌತಶಾಸ್ತ್ರಜ್ಞ, ಪ್ರೊಫೆಸರ್ ಎ.ಪಿ ಭಟ್, ಈ ಸಂದರ್ಭ ಗಗನಯಾತ್ರೆಯ ಸಾಹಸ ಮತ್ತು ತಾಂತ್ರಿಕ ಸಮಸ್ಯೆಯಿಂದ ವಿಜ್ಞಾನಿಗಳಿಗಾದ ತೊಂದರೆಗಳ ಬಗ್ಗೆ ಮತ್ತು ಅಮೆರಿಕ ನಾಸಾ ಸಂಸ್ಥೆ ಇಬ್ಬರೂ ವಿಜ್ಞಾನಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತಂದ ಬಗ್ಗೆ ಮಾಹಿತಿ ಉಪನ್ಯಾಸ ನೀಡಿದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ