ಮಾಹೆ ಜೊತೆಗೆ ಸ್ಕಾನ್‌ ಮತ್ತು ಹೆಪಿಯೆಸ್ಟ್‌ ಹೆಲ್ತ್‌ ಒಡಂಬಡಿಕೆ

ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ಮತ್ತು ಸ್ಕಾನ್‌ ರಿಸರ್ಚ್‌ ಟ್ರಸ್ಟ್‌ [ಎಸ್‌ಕಎಎನ್‌] ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು ಈ ಒಡಂಬಡಿಕೆಯು ಶೈಕ್ಷಣಿಕ, ಸಂಶೋಧಕ ಮತ್ತು ಪರಿಣತ ಸಲಹೆಗಳಿಗೆ ಸಂಬಂಧಿಸಿದ್ದಾಗಿದೆ.

ಮಣಿಪಾಲ್‌ ಅಕಾಡೆಮಿ ಆಫ್‌ ಆಫ್‌ ಹೈಯರ್‌ ಎಜುಕೇಶನ್‌ [ಮಾಹೆ] ಇನ್‌ಸ್ಟಿಟ್ಯೂಶನ್‌ ಆಫ್‌ ಎಮಿನೆನ್ಸ್‌ ಡೀಮ್ಡ್‌-ಟು-ಬಿ-ಯೂನಿವರ್ಸಿಟಿ ಆಗಿದ್ದು ಆರೋಗ್ಯ ವಿಜ್ಞಾನ [ಎಚ್‌ಎಸ್‌], ಆಡಳಿತಶಾಸ್ತ್ರ, ಕಾನೂನು, ಮಾನವಿಕಶಾಸ್ತ್ರ, ಸಮಾಜವಿಜ್ಞಾನ [ಎಂಎಲ್‌ಎಚ್‌ಎಸ್‌] ಮತ್ತು ತಂತ್ರಜ್ಞಾನ ಹಾಗೂ ವಿಜ್ಞಾನ [ಟಿ&ಎಸ್‌] ಕ್ಷೇತ್ರಗಳಲ್ಲಿ ಸುಮಾರು 400 ಕ್ಕೂ ಅಧಿಕ ಅಧ್ಯಯನ ವಿಷಯ ವಿಭಾಗಗಳನ್ನು ಹೊಂದಿದೆ. ದೇಶವಿದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ವಿಸ್ತರಿಸಿ, ಉನ್ನತ ಶ್ರೇಯಾಂಕಗಳೊಂದಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದೆ.

ಸ್ಕ್ಯಾನ್ ಬೆಂಗಳೂರು ಮೂಲದ ಲಾಭೋದ್ದೇಶವಿಲ್ಲದ ವೈದ್ಯಕೀಯ ಸಂಶೋಧನಾ ಟ್ರಸ್ಟ್ ಆಗಿದ್ದು, ವಯಸ್ಸಾದ ಮತ್ತು ನರವೈಜ್ಞಾನಿಕ ಕಾಯಿಲೆಗಳು, ಹೃದಯರಕ್ತನಾಳದ ಕಾಯಿಲೆಗಳು, ಮಧುಮೇಹ ಉಪಶಮನ ಮತ್ತು ಜೀವನಶೈಲಿ ಸಂಬಂಧಿತ ಅಸ್ವಸ್ಥತೆಗಳಿಗೆ ಹೊಸ ಚಿಕಿತ್ಸೆಗಳನ್ನು ಅಭಿವೃದ್ಧಿಪಡಿಸಲು ರೂಪಾಂತರ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತದೆ. ಕಿಂಡರ್ ಮತ್ತು ಸೌಮ್ಯವಾದ ಚಿಕಿತ್ಸಾ ಪ್ರೋಟೋಕಾಲ್‌ಗಳನ್ನು ಬಹಿರಂಗಪಡಿಸಲು ಸ್ಕ್ಯಾನ್ ಕರುಳಿನ ಸೂಕ್ಷ್ಮಾಣುಜೀವಿ, ಜೀನೋಮಿಕ್ಸ್, ಕಾಂಡಕೋಶಗಳು, ಆಣ್ವಿಕ ಜೀವಶಾಸ್ತ್ರ, ಬಯೋಮಾರ್ಕರ್‌ಗಳು, ಇಮ್ಯುನೊಥೆರಪಿಗಳು, ಪೋಷಣೆ ಮತ್ತು ಪರ್ಯಾಯ ಚಿಕಿತ್ಸೆಗಳಲ್ಲಿ ತನ್ನ ಪರಿಣತಿಯನ್ನು ಪಡೆದಿದೆ . ಸ್ಕ್ಯಾನ್ ನಲ್ಲಿನ ಬಯೋಇನ್ಫರ್ಮ್ಯಾಟಿಕ್ಸ್ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಇತರ ಸುಧಾರಿತ ತಂತ್ರಜ್ಞಾನಗಳನ್ನು ಊಹಿಸಲು, ಪೂರ್ವ-ಎಂಪ್ಟ್ ಮಾಡಲು, ರೋಗನಿರ್ಣಯ ಮಾಡಲು, ಚಿಕಿತ್ಸೆ ನೀಡಲು ಮತ್ತು ವೈದ್ಯಕೀಯ ಅಸ್ವಸ್ಥತೆಗಳ ಉಪಶಮನವನ್ನು ಸುಗಮಗೊಳಿಸಲು ತೀವ್ರವಾಗಿ ಅನುಸರಿಸುತ್ತದೆ. ವೈದ್ಯಕೀಯ ವಿಜ್ಞಾನದ ಭವಿಷ್ಯವನ್ನು ಉಜ್ವಲಗೊಳಿಸಿ, ಮಿಲಿಯಾಂತರ ಜೀವಿಗಳಿಗೆ ಉಪಕೃತವಾಗುವ ಧ್ಯೇಯವನ್ನು ಹೊಂದಿದೆ.

ನಿರ್ದಿಷ್ಟ ಪರಿಧಿಯೊಳಗಿನ ಸೂಕ್ಷ್ಮಜೀವಿಗಳ ಅಧ್ಯಯನ [ಮೆಕ್ರೋಬಯಾಮಿ ಸ್ಟಡೀಸ್‌]., ಮೂಳೆಮಜ್ಜೆಗೆ ಸಂಬಂಧಿಸಿದ ಸಂಶೋಧನೆ [ಸ್ಟೆಮ್‌ ಸೆಲ್‌ ರಿಸರ್ಚ್‌], ಜೈವಿಕ ಚಿಕಿತ್ಸೆ [ಬಯೋಥೆರಾಪಿಟಿಕ್ಸ್‌] ಮೊದಲಾದವು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವದ ಸಂಶೋಧನೆಯ ಯೋಜನೆಗಳನ್ನು ಈ ಒಡಂಬಡಿಕೆ ಒಳಗೊಂಡಿದೆ. ಇದರಿಂದ ‘ಹೆಪಿಯೆಸ್ಡ್‌ ಹೆಲ್ತ್‌’ನ ಅನ್ಯಾನ್ಯ ಆರೋಗ್ಯ ಆರೈಕೆ ಕಾರ್ಯಕ್ರಮಗಳಿಗೆ ಮಾಹೆಯು ಅನುಭವಪೂರ್ಣ ಪರಿಣತ ಸಲಹೆಗಳನ್ನು ನೀಡಲು ಸಾಧ್ಯವಾಗಲಿದೆ.

ಸ್ಕಾನ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪನ ವಿಶ್ವಸ್ತ [ಮೆನೇಜಿಂಗ್‌ ಟ್ರಸ್ಟಿ] ಅಶೋಕ್‌ ಸೂಟಾ ಈ ಸಂದರ್ಭದಲ್ಲಿ ಹೇಳಿದ್ದು ಹೀಗೆ : ಮಣಿಪಾಲ ಅಕಾಡೆಮಿ ಆಪ್‌ ಹೆಯರ್‌ ಎಜುಕೇಶನ್‌ [ಮಾಹೆ] ನಂಥ ಪ್ರತಿಷ್ಠಿತ ಸಂಸ್ಥೆಯೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಶೈಕ್ಷಣಿಕ ಸಹಭಾಗಿತ್ವಕ್ಕೆ ಸಂಬಂಧಿಸಿ ಒಪ್ಪಂದಕ್ಕೆ ಸಹಿ ಹಾಕಲು ತುಂಬ ಸಂತೋಷವೆನಿಸುತ್ತದೆ. ವಿವಿಧ ಆರೋಗ್ಯ ರಕ್ಷಣೆ ಕಾರ್ಯಕ್ರಮಗಳಿಗಾಗಿ ಇರುವ ‘ಹೆಪಿಯೆಸ್ಟ್‌ ಹೆಲ್ತ್‌’ ಗಾಗಿ ಸಲಹೆ ನೀಡುವ ಒಪ್ಪಂದವನ್ನೂ ಮಾಡಿದ್ದೇವೆ.ಮಾಹೆಗೆ ಶೈಕ್ಷಣಿಕ, ಸಂಶೋಧನ ಮತ್ತು ವಿವಿಧ ರೀತಿಯ ಆರೋಗ್ಯ ಆರೈಕೆ ಕಾರ್ಯಕ್ರಮಗಳಲ್ಲಿ ಅನೇಕ ವರ್ಷಗಳ ಅನುಭವವಿದೆ. ನಾವು ವಿಜ್ಞಾನದ ಗಡಿಯನ್ನು ವಿಸ್ತರಿಸಲು ಜಂಟಿಯಾಗಿ ಕಾರ್ಯನಿರ್ವಹಿಸಲು ಬದ್ಧರಾಗಿದ್ದೇವೆ.

ಮಣಿಪಾಲ್‌ ಅಕಾಡೆಮಿ ಆಫ್‌ ಹೆಯರ್‌ ಎಜುಕೇಶನ್‌ [ಮಾಹೆ] ಇದರ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್‌ ಅವರು ಈ ಒಪ್ಪಂದದ ಬಗ್ಗೆ ಹೀಗೆ ಹೇಳುತ್ತಾರೆ : ಈ ಸಹಭಾಗಿತ್ವವು ನಾವೀನ್ಯವನ್ನು ಉತ್ತೇಜಿಸುವ ಮತ್ತು ಸಂಶೋಧನೆಯನ್ನು ಸುಧಾರಿಸುವ ಮಾಹೆಯ ಆಶಯಕ್ಕೆ ಪೂರಕವಾಗಿದೆ. ಮಾಹೆಯಲ್ಲಿ ಯಾವತ್ತೂ ಆಳವಾದ ಶೈಕ್ಷಣಿಕ ಸಂಶೋಧನೆಗಳ ಮೂಲಕ ಆರೋಗ್ಯವಿಜ್ಞಾನದ ವ್ಯವಸ್ಥೆಯನ್ನು ಸುಧಾರಿಸಲು ಮುಂದಾಗುತ್ತೇವೆ. ಅಣುಜೀವವಿಜ್ಞಾನ [ಮೋಲಿಕ್ಯುಲಾರ್‌ ಬಯಾಲಜಿ], ಜೀವತಂತ್ರಜ್ಞಾನ [ಬಯೋಟೆಕ್ನಾಲಜಿ], ಚಿಕಿತ್ಸಕ ಸಂಶೋಧನೆಗೆ ಸಂಬಂಧಿಸಿದ ವ್ಯಾಪಕ ಅನುಭವದ ಹಿನ್ನೆಲೆಯನ್ನು ಹೊಂದಿರುವ ಮಾಹೆಯು ಸ್ಕಾನ್‌ ಮತ್ತು ಹೆಪಿಯೆಸ್ಟ್‌ ಹೆಲ್ತ್‌ನೊಂದಿಗೆ ಸಹಯೋಗವನ್ನು ಹೊಂದಲು ಅಭಿಮಾನಪಡುತ್ತದೆ. ಇದು ಕೇವಲ ಪರಸ್ಪರ ಸಾಮರ್ಥ್ಯವರ್ಥನೆಯ ಕ್ರಿಯೆಯಲ್ಲ; ಪ್ಸವರ್ಧಮಾನಕ್ಕೆ ಬರುತ್ತಿರುವ ಸೂಕ್ಷ್ಮಾಣುಜೀವಿಗಳ ಅಧ್ಯಯನ [ಮೆಕ್ರೋಬಯಾಮ್‌ ಸ್ಟಡೀಸ್‌], ಸ್ಟೆಮ್ ಸೆಲ್ ಚಿಕಿತ್ಸೆಗಳಂತಹ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾದ ಸಂಶೋಧನೆಗೆ ಕೊಡುಗೆ ನೀಡುವ ಪ್ರಯತ್ನವಾಗಿದೆ. ನಾವು ಜೊತೆಯಾಗಿ ಆರೋಗ್ಯವಿಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುವಲ್ಲಿ ಕ್ರಿಯಾಶೀಲರಾಗುತ್ತೇವೆ’

ಮಾಹೆಯ ಆರೋಗ್ಯವಿಜ್ಞಾನ ಕ್ಷೇತ್ರದ ಸಹ-ಉಪಕುಲಪತಿಗಳಾಗಿರುವ ಡಾ. ಶರತ್‌ ರಾವ್‌ ಈ ಒಪ್ಪಂದದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಹೀಗೆ ; ಸಹಭಾಗಿತ್ವದ ಸಂಶೋಧನೆ ಮತ್ತು ಶೈಕ್ಷಣಿಕ ಔನ್ನತ್ಯವನ್ನು ಸಾಧಿಸುವಲ್ಲಿ ಈ ಒಪ್ಪಂದವು ಮಹತ್ತ್ವದ ಹೆಜ್ಜೆಯಾಗಿದೆ. ಮಾಹೆಯು ಹಲವಾರು ವರ್ಷಗಳ ಸಂಶೋಧನ ಇತಿಹಾಸವನ್ನು ಹೊಂದಿದ್ದು ಆರೋಗ್ಯವಿಜ್ಞಾನ ಕ್ಷೇತ್ರಕ್ಕೆ ಗಣನೀಯ ಕೊಡುಗ ನೀಡುತ್ತ ಬಂದಿದೆ. ಮೆಕ್ರೋಮಯಾಮ್‌ ಕ್ಷೇತ್ರದಲ್ಲಿ ಮಾಹೆಯ ಅನುಭವ, ಅಂತರ್‌ಶಿಸ್ತೀಯ ಅಧ್ಯಯನ, ಅತ್ಯಾಧುನಿಕ ಸೌಲಭ್ಯಗಳು ಸ್ಕಾನ್‌ ಮತ್ತು ಹೆಪಿಯೆಸ್ಟ್‌ ಹೆಲ್ತ್‌ನೊಂದಿಗೆ ಸಹಯೋಗವನ್ನು ಹೊಂದಲು ಸಹಕಾರಿಯಾಗಿವೆ. ನಾವು ಜೊತೆಯಾಗಿ ಕ್ರಿಯಾಶೀಲತೆಯಿಂದ ವೈಜ್ಞಾನಿಕ ಅರಿವಿನ ವಿಸ್ತರಣೆ ಮಾಡಲು ಪ್ರಯತ್ನಿಸಲಿದ್ದೇವೆ. ಈ ಸಹಯೋಗವು ಆರೋಗ್ಯ ರಕ್ಷಣೆಯಲ್ಲಿ ಮಾತ್ರವಲ್ಲದೆ ಸಂಶೋಧನೆ ನಡೆಸುವ ವಿಧಾನದಲ್ಲಿಯೂ ಅರ್ಥಪೂರ್ಣ ಪ್ರಗತಿಗೆ ಕಾರಣವಾಗುತ್ತದೆ ಎಂದು ನಮಗೆ ವಿಶ್ವಾಸವಿದೆ. ಅಂತಿಮವಾಗಿ ಸಮಾಜಕ್ಕೆ ಪ್ರಯೋಜನಕಾರಿಯಾಗುವ ಮೂಲಕ ನಮ್ಮ ಸಂಶೋಧನೆಗಳು ಅರ್ಥಪೂರ್ಣವಾಗಲಿವೆ ಎಂಬ ವಿಶ್ವಾಸ ನನಗಿದೆ’

ಸ್ಕಾನ್‌ನ ನಿರ್ದೇಶಕ ಡಾ. ಯೋಗೇಶ ಶೌಚೆ ಅವರು ಈ ಒಪ್ಪಂದದ ಬಗ್ಗೆ ಹೇಳುವುದು ಹೀಗೆ : ನಾವು ಮಾಹೆಯೊಂದಿಗೆ ಸದ್ಯದಲ್ಲಿಯೇ ಕೆಲವು ನಿರ್ದಿಷ್ಟ ಸಂಶೋಧನ ಯೋಜನೆಗಳನ್ನು ಕೆಗೆತ್ತಿಕೊಳ್ಳಲಿದ್ದೇವೆ. ಸ್ಕಾನ್‌ ಕರುಳು ಸೂಕ್ಷ್ಮಾಣುಜೀವಿಗಳ ಅಧ್ಯಯನವನ್ನು ಉಳಿದ ಅಂಗಗಳ ಅಧ್ಯಯನಕ್ಕೆ ವಿಸ್ತರಿಸುವಲ್ಲಿ ಪರಿಣತಿಯನ್ನು ಸಾಧಿಸಿದ್ದು ತನ್ನ ಅನುಭವವನ್ನು ಇನ್ನಷ್ಟು ವಿಸ್ತರಿಸಲು ಬಯಸುತ್ತದೆ.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು