ಸೌರಭ್ ತಂತ್ರಿ ಅವರಿಗೆ ಪಿ.ಎಚ್.ಡಿ.

ಉಡುಪಿ : ಮಾಹೆಯಲ್ಲಿ ಮೆಟೀರಿಯಲ್ ಸೈನ್ಸ್ ವಾಹಿನಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಪಿ.ಎಚ್.ಡಿ. ಅಧ್ಯಯನ ನಡೆಸಿದ ಬೆಳ್ಮಣ್ಣಿನ ಸೌರಭ್ ತಂತ್ರಿ ಡಾಕ್ಟರೇಟ್ ಪದವಿಗೆ ಭಾಜರಾಗಿದ್ದಾರೆ.

ಬೆಳ್ಮಣ್ಣಿನ ನಡಿಗುತ್ತು ತಂತ್ರಿ ಕುಟುಂಬದ ಸತೀಶ್ ತಂತ್ರಿ ಹಾಗೂ ಲಕ್ಷ್ಮಿ ತಂತ್ರಿಯವರ ಪುತ್ರರಾಗಿರುವ ಇವರು ಬಂಟಕಲ್ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್. ಪದವಿ ಪಡೆದು ಮಾಹೆಯಲ್ಲಿ ಎಂ.ಟೆಕ್. ಪಡೆದ ನಂತರ ಪಿ.ಎಚ್.ಡಿ. ಅಧ್ಯಯನವನ್ನು ನಡೆಸುತ್ತಿದ್ದರು.

ಸಿಂಥೆಸಿಸ್ ಅಂಡ್ ಕ್ಯಾರಕ್ಟರೈಸೇಫನ್ ಆಫ್ ಮೋಡಿಫೈಡ್ ಟಿ೬-ಎಎ೭೦೭೫ ಮ್ಯಾಟಿಕ್ಸ್ ಬೇಸಡ್ ಗ್ರಾನೈಟ್ ಪೌಡರ್ ಅಂಡ್ ಸಿಲಿಕಾನ್ ನೈಟ್ರೆಂಡ್ ಪರ್ಟಿಕ್ಯುಲೇಟ್ಸ್ ರೀ ಇನ್‌ಪ್ಲೋರ್ಸ್ಡ್ ಕಾಂಪೋಸಿಟ್ಸ್ ಎಂಬ ವಿಷಯದ ಕುರಿತು ಡಾ. ಶಿವಪ್ರಕಾಶ್ ವೈ.ಎಂ. ಅವರ ಮಾರ್ಗದರ್ಶನದಲ್ಲಿ ಡಾ. ಗುರುಮೂರ್ತಿ ಬಿ.ಎಂ. ಅವರು ರಿಸರ್ಚ್ ಕೋ ಗೈಡ್ ಆಗಿದ್ದು ಡಾ. ಸೌರಭ್ ತಂತ್ರಿಯವರು ಅಧ್ಯಯನ ನಡೆಸಿ ತಮ್ಮ ಸಂಶೋಧನಾ ಮಹಾಪ್ರಬಂಧವನ್ನು ಮಾಹೆಗೆ ಸಲ್ಲಿಸಿದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ