ಶಂಕರನಾರಾಯಣ ಕಾಲೇಜಿನ ಸೋಲಾರ್‌ ಅಳವಡಿಕೆ ಶೀಘ್ರದಲ್ಲೇ ಪೂರ್ಣ – ಶಾಸಕ ಗಂಟಿಹೊಳೆ

ಬೈಂದೂರು : ಸಮೃದ್ಧ ಬೈಂದೂರು ಸಂಕಲ್ಪದೊಂದಿಗೆ ಆರಂಭಿಸಲಾದ 300 ಟ್ರೀಸ್ ಉಪಕ್ರಮದಡಿಯಲ್ಲಿ ಶಂಕರನಾರಾಯಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೋಲಾರ್‌ ಅಳವಡಿಕೆ ಕಾರ್ಯವು ಭರದಿಂದ ಸಾಗುತ್ತಿದೆ.

ಗ್ರಾಮೀಣ ಪ್ರದೇಶವಾಗಿರುವ ಶಂಕರನಾರಾಯಣದಲ್ಲಿ ವಿದ್ಯುತ್‌ ಸಮಸ್ಯೆಯಾಗುತ್ತಿದ್ದು, ಆಗಾಗ್ಗೆ ಕೈಕೊಡುವ ವಿದ್ಯುತ್‌ ಪರಿಣಾಮವಾಗಿ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಕಂಪ್ಯೂಟರ್‌ ಲ್ಯಾಬ್‌ ಬಳಸಲು ತೊಡಕು ಉಂಟಾಗುತ್ತಿತ್ತು. ಇದನ್ನು ಮನಗಂಡ ಶಾಸಕ ಗುರುರಾಜ್‌ ಗಂಟಿಹೊಳೆ ಅವರು ಕ್ಯಾನ್ಫಿನ್ಸ್ ಹೋಮ್ ಲಿಮಿಟೆಡ್ ಸಂಸ್ಥೆಗೆ ಈ ಕುರಿತು ಮಾಹಿತಿ ನೀಡಿದ್ದರು.

ಶಾಸಕರ ಮನವಿಗೆ ಒಪ್ಪಿದ ಸಂಸ್ಥೆಯು ತನ್ನ ಸಿಎಸ್ಆರ್ ನಿಧಿಯಿಂದ 18.5 ಲಕ್ಷ ವೆಚ್ಚದಲ್ಲಿ ಶಂಕರನಾರಾಯಣ ಕಾಲೇಜಿಗೆ ಸೋಲಾರ್ ಆಫ್ ಗ್ರಿಡ್ ಸಿಸ್ಟಮ್ ಹಾಗೂ ಸೋಲಾರ್ ಬೀದಿ ದೀಪಗಳ ಅಳವಡಿಕೆಗೆ ಸಮ್ಮತಿ ಸೂಚಿಸಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಕೆಲವೇ ದಿನಗಳಲ್ಲಿ ಇದು ಉದ್ಘಾಟನೆಗೊಳ್ಳಲಿದೆ ಎಂಬ ಮಾಹಿತಿಯನ್ನೂ ಶಾಸಕರು ನೀಡಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ