ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಉತ್ಕೃಷ್ಟ ಮಟ್ಟದ ‘ರಿಮ್ಜಿಮ್’ ಸಂತೂರ್ ವಾದನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ

ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇವರ ಆಶ್ರಯದಲ್ಲಿ ಇದೇ ಬರುವ ಆಗಸ್ಟ್ 25 ರಂದು ಸಂಜೆ 5.30 ಗಂಟೆಗೆ ‘ರಿಮ್ಜಿಮ್’ ಸಂತೂರ್ ವಾದನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮವನ್ನು ಮಂಗಳೂರು ನಗರದ ಫಾದರ್ ಎಲ್‌ಎಫ್ ರಸ್ಕಿನ್ಹಾ ಹಾಲ್, ಎಲ್‌ಸಿಆರ್‌ಐ ಬ್ಲಾಕ್, ಸೇಂಟ್ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.

ಪೂರ್ವಾಧದಲ್ಲಿ ಯುವ ಗಾಯಕ ಧಾರವಾಡದ ಶ್ರೀ ಸುಜಯೇಂದ್ರ ಕುಲಕರ್ಣಿ ಇವರಿಂದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ನಡೆಯಲಿದ್ದು, ಉತ್ತರಾರ್ಧದಲ್ಲಿ ರಾಷ್ಟ್ರಮಟ್ಟ ಖ್ಯಾತಿಯ ಸಂತೂರ್ ಕಲಾವಿದ ಮುಂಬೈನ ಪಂ ಸತ್ಯೇಂದ್ರ ಸಿಂಗ್ ಸೋಲಂಕಿ ಅವರಿಂದ ಸಂತೂರ್ ಕಾರ್ಯಕ್ರಮ ನಡೆಯಲಿದೆ.

ತಬ್ಲಾದಲ್ಲಿ ಬೋಪಾಲ್‌ನ ಶ್ರೀ ರಾಮೇಂದ್ರ ಸಿಂಗ್ ಸೋಲಂಕಿ, ಹಾರ್ಮೋನಿಯಂನಲ್ಲಿ ಬೆಂಗಳೂರಿನ ಶ್ರೀ ತೇಜಸ್ ಕಾಟೋಟಿ ಇವರು ಸಾಥ್ ನೀಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರೆಲ್ಲರಿಗೂ ಮುಕ್ತ ಪ್ರವೇಶಾವಕಾಶವಿದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀ ನರೇಂದ್ರ ಎಲ್. ನಾಯಕ್ ರವರು ಕೋರಿದ್ದಾರೆ.

Related posts

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಸಿಂಧೂರ್ ಕಾರ್ಯಾಚರಣೆ ಯಶಸ್ವಿ – ಶಾಸಕರ ನೇತೃತ್ವದಲ್ಲಿ ವಿಶೇಷ ಪೂಜೆ

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅರೆಸ್ಟ್