ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತ ಪಡಿಸುವ ಉತ್ಕೃಷ್ಟ ಮಟ್ಟದ ‘ರಿಮ್ಜಿಮ್’ ಸಂತೂರ್ ವಾದನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ

ಮಂಗಳೂರು : ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇದರ ಆಶ್ರಯದಲ್ಲಿ ಸಂತೂರ್ ವಾದನ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ‘ರಿಮ್ಜಿಮ್’ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಯುವ ಗಾಯಕ ಧಾರವಾಡದ ಶ್ರೀ ಸುಜಯೇಂದ್ರ ಕುಲಕರ್ಣಿ ಇವರಿಂದ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ ಗಾಯನ ಹಾಗೂ ರಾಷ್ಟ್ರಮಟ್ಟ ಖ್ಯಾತಿಯ ಸಂತೂರ್ ಕಲಾವಿದ ಮುಂಬೈನ ಪಂ ಸತ್ಯೇಂದ್ರ ಸಿಂಗ್ ಸೋಲಂಕಿ ಅವರಿಂದ ಸಂತೂರ್ ವಾದನ ನಡೆಯಿತು.

ತಬ್ಲಾದಲ್ಲಿ ಬೋಪಾಲ್‌ನ ಶ್ರೀ ರಾಮೇಂದ್ರ ಸಿಂಗ್ ಸೋಲಂಕಿ, ಹಾರ್ಮೋನಿಯಂನಲ್ಲಿ ಬೆಂಗಳೂರಿನ ಶ್ರೀ ತೇಜಸ್ ಕಾಟೋಟಿ ಇವರು ಸಾಥ್ ನೀಡಿದರು.

Related posts

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ಉಡುಪಿ – ಪ್ರಯಾಗ್ ರಾಜ್ ವಿಶೇಷ ರೈಲಿಗೆ ಪೇಜಾವರ ಶ್ರೀಗಳಿಂದ ಚಾಲನೆ

ಫಾಸ್ಟ್‌ಟ್ಯಾಗ್‌ ಹೊಸ ನಿಯಮ ಜಾರಿ: ಕಡಿಮೆ ಬ್ಯಾಲೆನ್ಸ್ ಇದ್ರೆ ದುಪ್ಪಟ್ಟು ದಂಡ.!