‘ಸಿಎಂ ಸಿದ್ರಾಮಯ್ಯನನ್ನು ಕೊಂದ್ರೆ ಹಿಂದುಗಳಿಗೆ ನೆಮ್ಮದಿ’ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ ಸಂಪತ್ ಅರೆಸ್ಟ್

ಉಡುಪಿ : ‘sampussampu s SANOOR’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ಸಿ.ಎಂ ಸಿದ್ದರಾಮಯ್ಯನನ್ನು ಕೊಂದ್ರೆ ಹಿಂದುಗಳಿಗೆ ನೆಮ್ಮದಿ’ ಎಂದು ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂಪತ್ ಸಾಲಿಯಾನ್ ಬಂಧಿತ ಆರೋಪಿ.

ಆರೋಪಿ ಬೆಂಗಳೂರಿನ ಹೋಂ ಗಾರ್ಡ್ ಕಚೇರಿಯಲ್ಲಿ ಕೆಲಸ ನಿರ್ವಹಿಸಿಕೊಂಡಿದ್ದ. ಸಿದ್ದರಾಮಯ್ಯನನ್ನು ಕೊಂದ್ರೆ ಹಿಂದುಗಳಿಗೆ ನೆಮ್ಮದಿ ಎಂಬ ಆರೋಪಿಯ ಪೋಸ್ಟ್ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಸೂರಜ್ ಎಂಬವರು ದೂರು ದಾಖಲಿಸಿದ್ದರು. ಅದರಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 68/2025 ಕಲಂ. 353(2) BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಇದೀಗ ಸಂಪತ್ ಸಾಲಿಯಾನ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Related posts

ಉಡುಪಿ ಕಡಲತೀರದಲ್ಲಿ ಪೆಹಲ್ಗಾಮ್ ಹಿಂದೂ ನರಮೇಧದ ಮೃತರ ಆತ್ಮಕ್ಕೆ ಶಾಂತಿ ಕೋರಿ ಅಪರಕ್ರಿಯೆ

ತಂದೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪೆರೋಲ್‌ನಲ್ಲಿ ಉಡುಪಿಗೆ ಆಗಮಿಸಿದ ಭೂಗತ ಪಾತಕಿ ಬನ್ನಂಜೆ ರಾಜ

ಅಕ್ರಮ ಗೋ ಸಾಗಟ ಪತ್ತೆ; ನಾಲ್ಕು ಜಾನುವಾರುಗಳ ರಕ್ಷಣೆ