ನಿಷೇಧಿತ ಡ್ರಗ್ಸ್‌ ಗಾಂಜಾ ಮಾರಾಟ; ಇಬ್ಬರು ಸೆರೆ

ಮಂಗಳೂರು : ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಪಿಲಿಕುಳದ ಬಳಿ ಇರುವ ದೂರದರ್ಶನ ಕೇಂದ್ರದ ಮುಂಭಾಗದ ಗೇಟ್‌ನ ಬಳಿಯಲ್ಲಿ ಸಾರ್ವಜನಿಕರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಡ್ರಗ್ಸ್‌ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರ ದಕ್ಷಿಣ ಉಪವಿಭಾಗದ ಡ್ರಗ್ಸ್‌ ನಿಗ್ರಹ ತಂಡ ಬಂಧಿಸಿದೆ.

ಬಂಧಿತ ಆರೋಪಿಗಳನ್ನು ಮೂಡಗ್ರಾಮದ ಮೊಹಮ್ಮದ್‌ ಆಸೀಫ್ (34) ಮತ್ತು ನಿಯಾಜ್‌ ಎನ್‌.ಎ.(40) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಅಂದಾಜು 20 ಸಾವಿರ ರೂ. ಮೌಲ್ಯದ ಸುಮಾರು 958 ಗ್ರಾಂ ಗಾಂಜಾ ಮತ್ತು ಮೊಬೈಲ್‌ ಫೋನ್‌ ಅನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌, ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್‌ ಮತ್ತು ಕೆ. ರವಿಶಂಕರ್‌ ನಿರ್ದೇಶನದಂತೆ ಮಂಗಳೂರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತೆ ಧನ್ಯಾ ಎನ್‌. ನಾಯಕ್‌ ಅವರ ನೇತೃತ್ವದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯ ನಿರೀಕ್ಷಕ ಕೆ.ಆರ್‌. ಶಿವಕುಮಾರ್‌, ಪಿಎಸ್‌ಐ ಅರುಣ್‌ ಕುಮಾರ್‌, ಡ್ರಗ್ಸ್‌ ನಿಗ್ರಹ ತಂಡದ ಪಿಎಸ್‌ಐ ಪುನೀತ್‌, ಸಿಬಂದಿ ಸಾಜು ನಾಯರ್‌, ಮಹೇಶ್‌, ಅಕ್ರಂ ಮತ್ತು ತಿರುಮಲೇಶ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Related posts

ಪರವಾನಿಗೆ ಇಲ್ಲದ ಪಿಸ್ತೂಲ್ ಮಿಸ್‌ಫೈರ್ ಯುವಕನಿಗೆ ಗುಂಡೇಟು – ಪ್ರಕರಣ ದಾಖಲು

ಹೊಡೆದಾಟ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

ರಸ್ತೆ ಬದಿಯ ಮರಕ್ಕೆ ಬೈಕ್ ಢಿಕ್ಕಿ; ಸವಾರ ಮೃತ್ಯು