108 ಅರೋಗ್ಯ ಕವಚ ಆಂಬುಲೆನ್ಸ್‌ನಲ್ಲಿ ಸುರಕ್ಷಿತ ಹೆರಿಗೆ

ಬ್ರಹ್ಮಾವರ : 108 ಅರೋಗ್ಯ ಕವಚ ಆಂಬುಲೆನ್ಸ್‌ನಲ್ಲಿ ಸುರಕ್ಷಿತ ಹೆರಿಗೆಯಾದ ಘಟನೆ ಇಂದು ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ ನಡೆದಿದೆ.

ಬೆಳಗ್ಗಿನ ಜಾವ ಕೊಕ್ಕರ್ಣೆಯ 108 ಆಂಬುಲೆನ್ಸ್‌ಗೆ ಕರೆ ಬಂದಿತ್ತು. ಅದರಂತೆ ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮಕ್ಕೆ ಧಾವಿಸಿದ 108 ಆಂಬುಲೆನ್ಸ್ ಸಿಬ್ಬಂದಿ, ರಾಜೇಶ್ವರಿ (27) ಎಂಬ ಗರ್ಭಿಣಿ‌ಯನ್ನು ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಗಂಡು ಮಗುವಿಗೆ ಜನ್ಮ ನೀಡಿದಳು. ತಕ್ಷಣ ಸಿಂಬ್ಬoದಿ ಮತ್ತು ಸಹಾಯಕರು ಸುರಕ್ಷಿತ ಹೆರಿಗೆಗೆ ಸಹಾಯ ಮಾಡಿದ್ದಾರೆ. ಬಳಿಕ ಚಾಲಕ ಪ್ರಕಾಶ್ ತಾಯಿ ಮತ್ತು ಮಗುವನ್ನು ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ತಾಯಿ ಮತ್ತು ಮಗು ಅರೋಗ್ಯ‌ವಾಗಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.

Related posts

ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಗೆ ದಾಳಿ : ಇಬ್ಬರ ಬಂಧನ; ಯುವತಿಯ ರಕ್ಷಣೆ

ಬೈಕ್‌ನಲ್ಲಿ ಅಪಾಯಕಾರಿ ವೀಲಿಂಗ್‌ ಮಾಡುತ್ತಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

“ವಿಶೇಷ ಆಹ್ವಾನಿತ ಯೂತ್ ಐಕಾನ್” ಆಗಿ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ಆಯ್ಕೆ!