ರೋಟರಿ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್ ಕೊಡುಗೆ

ಬ್ರಹ್ಮಾವರ : ರೋಟರಿ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್‌ನ್ನ ನೀಡಿದ್ದು ಅದರ ಹಸ್ತಾಂತರ ಕಾರ್ಯಕ್ರಮವು ನೆರವೇರಿತು.

ಪ್ರಾಯೋಜಕರಾದ ಶ್ರೀಯುತ ಕಮಲಾಕರ ನಾಯಕರು ಕೊಡುಗೆಯ ಹಸ್ತಾಂತರ ನೆರವೇರಿಸಿ ಇಂತಹ ಉಪಯುಕ್ತ ಸಾಧನವನ್ನು ನೀಡುವರೇ ಬಹಳ ಸಂತೋಷ‌ವಾಗಿದೆಯೆಂದು ಹೇಳಿ ರೋಟರಿ ಈ ಸೇವಾಕಾರ್ಯಕ್ಕೆ ಅಭಿನಂದಿಸಿದರು.

ಪ್ರಾರಂಭದಲ್ಲಿ ಸುಮೇಧಾ ಸಂಸ್ಥೆಯ ಕೋಶಾಧಿಕಾರಿ ರಾಮಚಂದ್ರ ಉಪಾಧ್ಯಾಯರು ಸ್ವಾಗತಿಸಿದರು. ರೋಟರಿ ಅಧ್ಯಕ್ಷ ರೋ. ಗುರುರಾಜ ಭಟ್‌ರು ದನ್ಯವಾದ ಸಮರ್ಪಿಸಿದರು. ನಂತರ ಡಾ. ಪಿ.ವಿ. ಭಂಡಾರಿ ಮತ್ತು ಡಾ. ಎ.ವಿ. ಬಾಳಿಗ ಆಸ್ಪತ್ರೆ‌ಯ ತಜ್ಞ‌ರಿಂದ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಸಮಾಲೋಚನೆ ನಡೆಸಲಾಯಿತು. ಡಾ. ಪಿ.ವಿ.ಭಂಡಾರಿಯವರು ಮಕ್ಕಳ ಹೆತ್ತವರಿಗೆ ಉಪಯುಕ್ತ ಸಲಹೆ ಮತ್ತು ವಿಶೇಷ ಮಕ್ಕಳ ಆರೋಗ್ಯದ ಬಗ್ಗೆ ಸಮಾಲೋಚನೆ ಮಾಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ರೋ. ವೈಷ್ಣವಿ ಆಚಾರ್ಯ, ರೋ. ಸುಬ್ರಹ್ಮಣ್ಯ ಕಾರಂತ, ರೋ. ಶುಭಲಕ್ಷ್ಮಿ ಭಟ್, ಶಾಲಾ ಮುಖ್ಯಸ್ಥೆ ಶ್ರೀಮತಿ ಸುಮನಾ ಪ್ರಭು ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು