ಡಿ.21, 22ರಂದು ರೋಟರಿ ಜಿಲ್ಲೆ 3182 “ರೋಟಾ ಮ್ಯಾಜಿಕ್” ಕ್ರೀಡಾ ಉತ್ಸವ

ಉಡುಪಿ : ರೋಟರಿ ಜಿಲ್ಲೆ 3182ರ ರೋಟರಿ ಕ್ಲಬ್ ಮಣಿಪಾಲ ವಲಯ 4ರ ನೇತೃತ್ವದಲ್ಲಿ ‘ರೋಟಾ ಮ್ಯಾಜಿಕ್’ ಕ್ರೀಡಾ ಉತ್ಸವವನ್ನು ಇದೇ ಡಿಸೆಂಬರ್ 21 ಮತ್ತು 22ರಂದು ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕ್ರೀಡಾ ಸಭಾಪತಿ ಅಮಿತ್ ಅರವಿಂದ್ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎರಡು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಕ್ರಿಕೆಟ್, ವಾಲಿಬಾಲ್, ಈಜು, ಟ್ರಾಕ್ ಮತ್ತು ಫೀಲ್ಡ್ ಹಾಗೂ ಟಗ್ ಆಫ್ ವಾರ್‌ನಂತಹ ವಿವಿಧ ಸ್ಪರ್ಧೆಗಳು ನಡೆಯಲಿವೆ. ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಜಿಲ್ಲೆಗಳನ್ನು ಒಳಗೊಂಡ ರೋಟರಿ 3182ರಿಂದ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಡಿ.21ರಂದು ಸಂಜೆ 4.30ಕ್ಕೆ ಅಂತರಾಷ್ಟ್ರೀಯ ವೇಟ್ ಲಿಫ್ಟರ್ ಪುಷ್ಪರಾಜ್ ಹೆಗ್ಡೆ ಹಾಗೂ ಮ್ಯಾರಥಾನ್ ಓಟಗಾರ ಧೀರಜ್ ಭಂಡಾರಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರೋಟರಿ ಗವರ್ನರ್ ದೇವ್ ಆನಂದ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಿ. 22ರಂದು ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಯಶಪಾಲ್ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕ್ರೀಡಾ ಉಪಸಭಾಪತಿ ಕೆಂಪ್‌ರಾಜ್ ಎಚ್.ಬಿ., ಕ್ಲಬ್‌ ಸೇವೆ ನಿರ್ದೇಶಕಿ ರೇಣು ಜಯರಾಮ್, ಇಂವೆಟ್ ಕಾರ್ಯದರ್ಶಿ ಪ್ರಶಾಂತ್ ಹೆಗ್ಡೆ, ರೋಟರಿ ಸಹಾಯಕ ಸಭಾಪತಿ ಜಗನ್ನಾಥ್ ಕೋಟೆ, ರೋಟರಿ ಮಣಿಪಾಲ ಅಧ್ಯಕ್ಷ ಸುಭಾಷ್ ಬಂಗೇರ ಉಪಸ್ಥಿತರಿದ್ದರು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ