ರಿವಾಲ್ವರ್ ಮಿಸ್ ಫೈರ್ – ಯುವಕನಿಗೆ ಗಾಯ

ಮಂಗಳೂರು : ನಗರದ ಹೊರವಲಯದ ವಾಮಂಜೂರು ಸೆಕೆಂಡ್ ಹ್ಯಾಂಡ್ ಬಜಾರ್‌ನಲ್ಲಿ ರಿವಾಲ್ವರ್ ಮಿಸ್‌ಫೈರ್ ಆಗಿ ಯುವಕನೋರ್ವನು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.

ಸಫ್ವಾನ್ ಎಂಬಾತ ಗಾಯಾಳು ಯುವಕ. ಸೆಕೆಂಡ್ ಹ್ಯಾಂಡ್ ಬಜಾರ್‌ಗೆ ವಸ್ತುಗಳ ಖರೀದಿಗೆ ಸಫ್ವಾನ್ ಆಗಮಿಸಿದ್ದ. ಈ ವೇಳೆ ಟೇಬಲ್‌ನಲ್ಲಿ ರಿವಾಲ್ವರ್ ಗಮನಿಸಿದ್ದಾನೆ. ಈ ರಿವಾಲ್ವರ್ ಅನ್ನು ಆಟದ ವಸ್ತುವೆಂದು ಭಾವಿಸಿ ಸಫ್ವಾನ್ ತನ್ನ ಹೊಟ್ಟೆಗೆ ಗುರಿಯಾಗಿಟ್ಟುಕೊಂಡು ಫೈಯರ್ ಮಾಡಿಕೊಂಡಿದ್ದಾನೆ. ಪರಿಣಾಮ ಗುಂಡು ಸಿಡಿದು ಸಫ್ವಾನ್ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಸದ್ಯ ಗಾಯಾಳು ಯುವಕನನ್ನು ಪಡೀಲ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ರಿವಾಲ್ವರ್ ಅನ್ನು ಭಾಸ್ಕರ್ ಎಂಬವರು ಟೇಬಲ್ ಮೇಲೆ ಇಟ್ಟು ಹೋಗಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

ಮರದ ದಿಮ್ಮಿಗೆ ಮೀನುಗಾರಿಕಾ ಬೋಟ್ ಡಿಕ್ಕಿ : ಅಪಾರ ಹಾನಿ

ಸಿಬಿಐ ಅಧಿಕಾರಿ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ

ಪೆಟ್ರೋಲ್ ಬಂಕ್ ಮೇಲ್ವಿಚಾರಕನಿಂದ ವಂಚನೆ ಆರೋಪ; ದೂರು ದಾಖಲು