ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ

ಮಣಿಪಾಲ : ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಯನ್ನು ಎಲ್ಲ ಮತಗಟ್ಟೆ, ತಾಲೂಕು ಕಚೇರಿ, ಉಪ ವಿಭಾಗ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಪರಿಶೀಲಿಸಬಹುದು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣ‌ದಲ್ಲಿ ಜರಗಿದ ಮತ‌ದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-ಅಂತಿಮ ಮತದಾರರ ಪಟ್ಟಿಯನ್ನು ಅವರು ರಾಜಕೀಯ ಪಕ್ಷಗಳ ಮುಖಂಡರಿಗೆ ಹಸ್ತಾಂತರಿಸಿ ಮಾತನಾಡಿದರು.

ಜಿಲ್ಲೆಯ ವಿಧಾನಸಭಾವಾರು ಅಂತಿಮ ಮತದಾರರ ಪಟ್ಟಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,17,890 ಪುರುಷರು, 1,22,914 ಮಹಿಳೆಯರು, ಇಬ್ಬರು ತೃತೀಯ ಲಿಂಗಿಗಳು ಸಹಿತ 2,40,806 ಮತದಾರರು, ಕುಂದಾಪುರದಲ್ಲಿ 1,01,959 ಪುರುಷರು, 1,10,025 ಮಹಿಳೆಯರು, ಇಬ್ಬರು ತೃತೀಯ ಲಿಂಗಿಗಳು ಸಹಿತ 2,11,986 ಮತದಾರರು, ಉಡುಪಿಯಲ್ಲಿ 1,06,782 ಪುರುಷರು, 1,14,839 ಮಹಿಳೆಯರು, ಮೂವರು ತೃತೀಯ ಲಿಂಗಿಗಳು ಸಹಿತ 2,21,624, ಕಾಪು ಕ್ಷೇತ್ರದಲ್ಲಿ 92,598 ಪುರುಷರು, 1,00,583 ಮಹಿಳೆಯರು, ನಾಲ್ವರು ತೃತೀಯ ಲಿಂಗಿಗಳು ಸಹಿತ 1,93,185, ಕಾರ್ಕಳದಲ್ಲಿ 93,003 ಪುರುಷರು, 1,00,685 ಮಹಿಳೆಯರು ಸಹಿತ 1,93,688 ಹಾಗೂ ಜಿಲ್ಲೆಯಲ್ಲಿ ಒಟ್ಟು 5,12,232 ಪುರುಷರು, 5,49,046 ಮಹಿಳೆಯರು, 11 ತೃತೀಯ ಲಿಂಗಿಗಳು ಸಹಿತ 10,61,289 ಮತದಾರರಿದ್ದಾರೆ ಎಂದು ತಿಳಿಸಿದರು.

ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ ನಮೂನೆ-6ರಲ್ಲಿ 3,998, ನಮೂನೆ-6ಎಯಲ್ಲಿ 1, ನಮೂನೆ-8ರಲ್ಲಿ 1,288 ಸಹಿತ ಒಟ್ಟು 5,287 ಜನರು ಹೊಸದಾಗಿ ಸೇರ್ಪಡೆಗೆ ಅರ್ಜಿ ಸಲ್ಲಿಸಿ, 5,286 ಯುವ ಮತದಾರರು ಹೊಸದಾಗಿ ನೋಂದಣಿಯಾಗಿದ್ದಾರೆ. ನಮೂನೆ-7ರಲ್ಲಿ 7,398 ಅರ್ಜಿಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಹಾಗೂ ನಮೂನೆ-8ರಲ್ಲಿ ತಿದ್ದುಪಡಿಗಾಗಿ 5,499 ಜನರಿಂದ ಅರ್ಜಿಗಳು ಸಲ್ಲಿಕೆಯಾಗಿದ್ದು, 7,398 ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. 5,499 ಮತದಾರರ ಹೆಸರನ್ನು ತಿದ್ದುಪಡಿ ಮಾಡಲಾಗಿದೆ ಎಂದು ಹೇಳಿದರು.

Related posts

ಮರದ ದಿಮ್ಮಿಗೆ ಮೀನುಗಾರಿಕಾ ಬೋಟ್ ಡಿಕ್ಕಿ : ಅಪಾರ ಹಾನಿ

ಮೆಸ್ಕಾಂ ಎಟಿಪಿ ಬಿಲ್ ಪಾವತಿ ಸೇವೆ ಪುನರಾರಂಭಿಸಿ : ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ

ಸಿಬಿಐ ಅಧಿಕಾರಿ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ