ಪುತ್ತೂರು : ಮಾಣಿ ಮೈಸೂರು ಹೆದ್ದಾರಿಯ ಪುತ್ತೂರು ವಲಯದ ಮುಕ್ರಂಪಾಡಿಯಲ್ಲಿ ಗುರುವಾರ ಮಧ್ಯಾಹ್ನ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಗಂಭೀರ ಗಾಯಗೊಂಡ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸುಳ್ಯ ಸಮೀಪದ ಪಂಜ ಕೂತ್ತುಂಬ ಗ್ರಾಮದ ಸಂಪ್ಯ ನಿವಾಸಿ, ನಿವೃತ್ತ ಶಿಕ್ಷಕ ಕೃಷ್ಣಭಟ್ (76) ಮೃತರು ಅವರಿಗೆ ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಕೃಷ್ಣ ಭಟ್ ಅವರು ಪುತ್ತೂರಿಗೆ ಶುಭ ಕಾರ್ಯಕ್ಕೆ ಬಂದು ವಾಪಸ್ ಸುಳ್ಯಕ್ಕೆ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಈ ಮೇಳೆ ಅವರು ಬೈಕ್‌ನೊಂದಿಗೆ ನೆಲಕ್ಕೆ ಉರುಳಿ ಗಂಭೀರ ಗಾಯಗೊಂಡಿದ್ದರು. ಚಾಲಕ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳುವನ್ನು ಸ್ಥಳೀಯರು ಗಮನಿಸಿ ಮಂಗಳೂರು ಖಾಸಗಿ ಆಸತ್ರೆಗೆ ಕರೆತಂದು ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದ ಗುರುವಾರ ಸಂಜೆ ಮೃತಪಟ್ಟಿದ್ದಾರೆ.
ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಿಂದ ಕೆಲವೇ ದೂರದಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಪಿಕಪ್ ವಾಹನವೊಂದು ತೆರಳಿದ ದೃಶ್ಯ ಸೆರೆಯಾಗಿದೆ. ಈ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.