ನಿವೃತ್ತ ಮುಖ್ಯ ಶಿಕ್ಷಕ, ಕಲಾಪೋಷಕ ಸರ್ಪು ಸದಾನಂದ ಪಾಟೀಲ್ ನಿಧನ

ಉಡುಪಿ : ಚೇರ್ಕಾಡಿಯ ಆರ್.ಕೆ.ಪಾಟೀಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 36 ವರ್ಷಗಳ ಕಾಲ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಸರ್ಪು ಸದಾನಂದ ಪಾಟೀಲ್(73) ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು.

ಬಡಗುತಿಟ್ಟು, ಅದರಲ್ಲೂ ಮುಖ್ಯವಾಗಿ ಬ್ರಹ್ಮಾವರದ ಮಟಪಾಡಿ ಮತ್ತು ಹಾರಾಡಿ ಶೈಲಿಯ ಯಕ್ಷಗಾನದ ಬಗ್ಗೆ ಅತೀವ ಕಾಳಜಿ,ಆಸಕ್ತಿ ಹೊಂದಿದ ಇವರು, ವಿವಿಧ ಕಲಾ ಸಂಘಟನೆಗಳ ಪದಾಧಿಕಾರಿಯಾಗಿ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಪಾಟೀಲರು ಪತ್ನಿ, ಪುತ್ರ, ಪುತ್ರಿಯನ್ನು ಹಾಗೂ ಅಪಾರ ಶಿಷ್ಯವೃಂದ ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ.

ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾಗಿದ್ದ ಇವರ ನಿಧನಕ್ಕೆ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ನಾಳೆ ಬೆಳಗ್ಗೆ 9.30 ಗಂಟೆಗೆ ಸರ್ಪು ಮನೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Related posts

National Fame Award of India Books of Award – Sushanth Brahmavar

ಎಸೆಸೆಲ್ಸಿ ಮರುಮೌಲ್ಯಮಾಪನ : ಸಾಯಿಸ್ಪರ್ಶಗೆ ರಾಜ್ಯಕ್ಕೆ ಪ್ರಥಮ ರ್‍ಯಾಂಕ್ – 625 ಅಂಕ

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಶಿಕ್ಷಕಿ ಗೀತಾ ಎ. ಶೆಟ್ಟಿ ಆಯ್ಕೆ