ಮೆಸ್ಕಾಂ ಎಟಿಪಿ ಬಿಲ್ ಪಾವತಿ ಸೇವೆ ಪುನರಾರಂಭಿಸಿ : ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ

ಉಡುಪಿ : ಜನವರಿ 1 ರಿಂದ ವಿದ್ಯುತ್ ಬಿಲ್ ಪಾವತಿಸಲು ಎಟಿಪಿ ಸೇವೆ ಸ್ಥಗಿತಗೊಳಿಸಿರುವ ಹಿನ್ನೆಲೆ ಮೆಸ್ಕಾಂ ಕಚೇರಿಯಲ್ಲಿ ಬಿಲ್ ಪಾವತಿಸಲು ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಮೆಸ್ಕಾಂ ತಕ್ಷಣ ಎಟಿಪಿ ಬಿಲ್ ಪಾವತಿ ಸೇವೆ ಪುನರಾರಂಭ ಮಾಡುವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

ಎಟಿಪಿ ಸೇವೆ ಸ್ಥಗಿತಗೊಂಡ ಹಿನ್ನಲೆಯಲ್ಲಿ ಬಿಲ್ ಪಾವತಿ ಮಾಡಲು ಸರತಿ ಸಾಲಿನಲ್ಲಿ ಹಿರಿಯ ನಾಗರಿಕರು ಸಹಿತ ಸಾರ್ವಜನಿಕರು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಚೇರಿ ಅವಧಿಯಲ್ಲಿ ಮಾತ್ರ ಬಿಲ್ ಪಾವತಿಗೆ ಕೌಂಟರ್ ತೆರೆದಿರುವ ಹಿನ್ನಲೆಯಲ್ಲಿ, ಉದ್ಯೋಗಸ್ಥರಿಗೆ ರಜೆ ದಿನ ಅಥವಾ ಇತರ ಸಮಯದಲ್ಲಿ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ.

ಉಡುಪಿ ಸಹಿತ ಹಲವು ಮೆಸ್ಕಾಂ ಕಚೇರಿಯಲ್ಲಿ ಒಂದು ಕೌಂಟರ್ ಮಾತ್ರ ಇದೆ, ಹೆಚ್ಚುವರಿ ಕೌಂಟರ್ ತೆರೆಯಲು ಸಿಬ್ಬಂದಿ ಕೊರತೆಯಿರುವ ಮಾಹಿತಿ ಇದ್ದು, ಈಗಾಗಲೇ ಮೆಸ್ಕಾಂ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸಲು ಹೆಚ್ಚುವರಿ ಕೌಂಟರ್ ಆರಂಭ ಹಾಗೂ ಎಟಿಪಿ ಬಿಲ್ ಪಾವತಿ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ ಹಾಗೂ ಸಮಸ್ಯೆ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಇಂಧನ ಸಚಿವರಾದ ಶ್ರೀ ಕೆ. ಜೆ. ಜಾರ್ಜ್ ರವರಿಗೆ ಮನವಿ ಮಾಡುವುದಾಗಿ ಯಶ್‌ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ