ಕಾರ್ಕಳ : ಮೂಲಭೂತ ಸೌಕರ್ಯ ವಂಚಿತರಾಗಿರುವ ಬಗ್ಗೆ ಪತ್ರಕರ್ತ ಮುಖೇನ ಸರ್ಕಾರದ ಗಮನ ಸೆಳೆಯವ ಪ್ರಯತ್ನವಾಗಬೇಕು. ಪತ್ರಕರ್ತ ಜವಾಬ್ದಾರಿ ಈ ಸಮಾಜದಲ್ಲಿ ಬಹುಮುಖ್ಯವಾಗಿದೆ. ಸಮಾಜ ಮುಖಿ, ಸಮಾಜ ಕಾರ್ಯನಾಡಿಗೆ, ಜಗತ್ತಿಗೆ ತಲುಪಿಸುವ ಕಾರ್ಯದಲ್ಲಿ ಪತ್ರಕರ್ತರ ಪಾತ್ರ ಅಗತ್ಯ ಎಂದು ಬಿಲ್ಲವ ಸೇವಾ ಸಮಾಜ ಸಂಘದ ಅಧ್ಯಕ್ಷ ಡಿ ಆರ್ ರಾಜು ಹೇಳಿದರು.
ಅವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಕಳ ವತಿಯಿಂದ ಪ್ರತಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಿವೃತ್ತಿ ಶಿಕ್ಷಕಿ ಸಾವಿತ್ರಿ ಮನೋಹರ್ ಮಾತನಾಡಿ ಪತ್ರಕರ್ತರು ಎಂದರೆ ಜನರ ಜೀವನದ ಪ್ರತಿಬಿಂಬ. ಪತ್ರಕರ್ತ ಬದುಕು ತುಂಬಾ ಕಠಿಣ. ಪತ್ರಕರ್ತರು ಬಹಳ ಎಚ್ಚರಿಕೆಯಿಂದ ಕೆಲಸಮಾಡಬೇಕು. ಪ್ರಸ್ತುತ ದಿನಗಳಲ್ಲಿ ಪತ್ರಿಕೋದ್ಯಮದ ಬೆಳವಣಿಗೆ ಕಂಡಾಗ ತುಂಬಾ ಸಂತೋಷವಾಗುತ್ತೆ ಎಂದರು.
ಇದೇವೇಳೆ ಹಿರಿಯ ಪತ್ರಕರ್ತ ಹಾಗೂ ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಮೊಹಮ್ಮದ್ ಷರೀಫ್ ವಹಿಸಿದರು. ವೇದಿಕೆಯಲ್ಲಿ ಉಡುಪಿ ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ, ಕೋಶಾಧಿಕಾರಿ ಕೆ ಎಂ ಖಲೀಲ್, ಜಿಲ್ಲಾ ಸಮಿತಿ ಸದಸ್ಯ ಉದಯ ಕುಮಾರ್
ಉಪಸ್ಥಿತರಿದ್ದರು.