ರೆಸಾರ್ಟ್‌, ಹೋಮ್‌ಸ್ಟೇ ನೋಂದಣಿ ಕಡ್ಡಾಯ; ಸೂಚನೆ

ಮಂಗಳೂರು : ರೆಸಾರ್ಟ್‌ ಮತ್ತು ಹೋಮ್‌ಸ್ಟೇಗಳನ್ನು ಕಡ್ಡಾಯವಾಗಿ ನೋಂದಣಿ ಮಾಡುವುದಲ್ಲದೇ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮತ್ತು ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಸೂಚಿಸಿದ್ದಾರೆ.

ಬುಧವಾರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ನಡೆದ ರೆಸಾರ್ಟ್‌, ಹೋಮ್‌ ಸ್ಟೇ ಮಾಲಕರ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯ ವಿವಿಧ ಪ್ರವಾಸಿ ತಾಣಗಳಲ್ಲಿ ನಡೆಸಲಾಗುತ್ತಿರುವ ರೆಸಾರ್ಟ್‌/ಹೋಮ್‌ ಸ್ಟೇಗಳಲ್ಲಿ ಬರುವ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ತಿಳಿಸಲಾಯಿತು.

ಸುಮಾರು 118 ರೆಸಾರ್ಟ್‌/ಹೋಮ್‌ ಸ್ಟೇ ಮಾಲಕರು, ಅಬಕಾರಿ, ಪ್ರವಾಸೋದ್ಯಮ ಮತ್ತು ವಿವಿಧ ಇಲಾಖೆಯ ಅಧಿ‌ಕಾರಿಗಳು ಪಾಲ್ಗೊಂಡಿದ್ದರು.

Related posts

ಮೀನು ವ್ಯಾಪಾರಿಗೆ 90 ಲಕ್ಷ ರೂ.ವಂಚನೆ – ದೂರು ದಾಖಲು

ಕಾವಡಿ ಗ್ರಾಮದಲ್ಲಿ ಮಲ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ವಿರುದ್ಧ ಪ್ರತಿಭಟನೆ

ಟೋಲ್ ಸುಲಿಗೆಗೆ ಸದ್ಯ ಬ್ರೇಕ್; ಬಸ್ ಮಾಲಕರು ಖುಷ್