ಡಿವೈಡರ್ ಮಧ್ಯೆ ಅಪಾಯ ಆಹ್ವಾನಿಸುತ್ತಿರುವ ವಿದ್ಯುತ್ ಪೆಟ್ಟಿಗೆಗಳ ದುರಸ್ತಿ

ಉಡುಪಿ : ನಗರದ ಕವಿ ಮುದ್ದಣ್ಣ ಮಾರ್ಗದ, ರಸ್ತೆ ವಿಭಜಕ ದಂಡೆಯ ಉದ್ದಕ್ಕೂ ರಸ್ತೆ ದೀಪ ಕಂಬಗಳ ಕೆಳಗೆ, ವಿದ್ಯುತ್ ಸರಬರಾಜು ನಿಯಂತ್ರಣ ಪೆಟ್ಟಿಗೆಗಳಿದ್ದವು, ಅವುಗಳು ಸುರಕ್ಷಿತ ಸ್ಥಿತಿಯಲ್ಲಿಲ್ಲದೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದವು.

ಈ ಬಗ್ಗೆ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡುವರು ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿದ್ದರು. ಮಾಧ್ಯಮಗಳು ಸಮಸ್ಯೆಯ ಕುರಿತು ಬೆಳಕು ಚೆಲ್ಲಿದ್ದವು. ಸ್ಪಂದಿಸಿದ ನಗರಸಭೆಯ ಪೌರಾಯುಕ್ತ ರಾಯಪ್ಪ ಅವರು ವಿಶೇಷ ಕಾಳಜಿವಹಿಸಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಅವರ ಸಮಯಪ್ರಜ್ಞೆಯಿಂದ ಸಂಭವನೀಯ ಅಪಾಯಗಳು ದೂರವಾದಂತಾಗಿದೆ.

ಕಂಬಗಳಿಗೆ ಅಳವಡಿಸಿದ್ದ ವಿದ್ಯುತ್ ನಿಯಂತ್ರಣದ ಪೆಟ್ಟಿಗೆಗಳ ಬಾಗಿಲುಗಳು ತೆರೆದುಕೊಂಡಿದ್ದವು. ಕೆಲವು ಕಡೆಗಳಲ್ಲಿ ಕಂಬಗಳಿಂದ ಪೆಟ್ಟಿಗೆಗಳು ಬೇರ್ಪಟ್ಟು ರಸ್ತೆಯತ್ತ ವಾಲಿಕೊಂಡಿದ್ದವು. ದ್ವಿಚಕ್ರ ವಾಹನ ಸವಾರರು ಸಂಚರಿಸುವಾಗ, ಶಾಲಾ ಮಕ್ಕಳು, ಸಾರ್ವಜನಿಕರು ನಡೆದಾಡುವಾಗ ವಿದ್ಯುತ್ ಸ್ಪರ್ಶಿಸುವ ಸಾಧ್ಯತೆಯು ಇಲ್ಲಿತ್ತು.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ