ಕೋಟ : ಕೋಟದ ವರುಣತೀರ್ಥ ಕೆರೆ ನವೀಕರಣಗೊಳ್ಳುವ ಕೊನೆಯ ಹಂತದಲ್ಲಿದ್ದು ಈ ಹಿನ್ನಲ್ಲೆಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕೆರೆಯ ಪೂರ್ವ ದಿಕ್ಕಿನಲ್ಲಿರುವ ರಸ್ತೆ ನೀರನ್ನು ಚರಂಡಿ ಮೂಲಕ ಹರಿದುಹೋಗವಂತೆ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ಮನವಿ ಸಲ್ಲಿಸಿದ ಹಿನ್ನಲ್ಲೆಯಲ್ಲಿ ಸುಮಾರು 30ಲಕ್ಷ ರೂ. ಚರಂಡಿಗೆ ಮೀಸಲಿರಿಸಿ ಅದನ್ನು ಶೀಘ್ರಗತಿಯಲ್ಲಿ ಅನುಷ್ಠಾನಗೊಳಿಸಿದ ದಿಸೆಯಲ್ಲಿ ಕೋಟ ಗ್ರಾ.ಪಂ ಮತ್ತು ಸ್ಥಳೀಯರಾದ ರತ್ನಾಕರ ಪೂಜಾರಿ ಹಾಗೂ ಅವಿನಾಶ್ ಮರಕಾಲ ಸಂಸದರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗುತ್ತಿಗೆದಾರ ಸುನೀಲ್ ಪೂಜಾರಿ, ಕೋಟ ಪಂಚಾಯತ್ ಸದಸ್ಯರಾದ ಚಂದ್ರ ಪೂಜಾರಿ, ಅಜಿತ್ ದೇವಾಡಿಗ, ಪ್ರಶಾಂತ ಶೆಟ್ಟಿ, ಶಾರದ ಕಾಂಚನ್, ಗುಲಾಭಿ ಪೂಜಾರಿ, ಶೇಖರ್ ಜಿ.ಮಾಜಿ ಪಂಚಾಯತ್ ಸದಸ್ಯ ರವೀಂದ್ರ ಜೋಗಿ, ಮಾಜಿ ತಾ.ಪಂ ಸದಸ್ಯೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.