ಕೊಳಚೆ ನೀರಿಗೆ ಪರಿಹಾರ; ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು : ಕೊಣಾಜೆ ಗ್ರಾಮದ ಅಸೈಗೋಳಿಯಲ್ಲಿರುವ 7ನೇ ಪಡೆ ಕೆಎಸ್‌ಆರ್‌ಪಿಯ ವಸತಿಗೃಹದ ಕೊಳಚೆ ನೀರು ಸ್ಥಳೀಯ ಹಲವು ಮನೆಗಳ ಮುಂದೆ ಹರಿಯುತ್ತಿರುವುದಾಗಿ ಆರೋಪಿಸಿ ಅಸೈಗೋಳಿಯ ಕಾರುಣ್ಯಾ ಫೌಂಡೇಶನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ಗೆ ಮನವಿ ಸಲ್ಲಿಸಲಾಯಿತು. ಮನವಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗೆ ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕಾರುಣ್ಯಾ ಫೌಂಡೇಶನ್‌ನ ಅಧ್ಯಕ್ಷ ಅರುಣ್ ಡಿಸೋಜಾ, ಸ್ಥಳೀಯರಾದ ಸುಧಾಕರ್ ನಾಯಕ್, ವಿಶ್ವನಾಥ್ ಶೆಟ್ಟಿ, ಪುರಂದರ ಶೆಟ್ಟಿ ಅಸೈ, ವಿನ್ಸಿ‌ ರೇಗೋ, ಕವಿತಾ ಪಿ.ಆರ್, ಶರ್ಮಿಳಾ ಪಿ. ರೈ ಉಪಸ್ಥಿತರಿದ್ದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ನಾಪತ್ತೆಯಾಗಿರುವ ಮೀನುಗಾರನ ಕುಟುಂಬಕ್ಕೆ ಪರಿಹಾರ ಒದಗಿಸಲು ಗಂಟಿಹೊಳೆ ಆಗ್ರಹ