ಕಾರ್ಕಳದ 3 ಗ್ರಾಮ ಪಂಚಾಯತ್ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ : ಶಾಸಕ ಸುನಿಲ್ ಕುಮಾರ್ ಮಾಹಿತಿ

ಕಾರ್ಕಳ : ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಸರ್ಕಾರಿ ಯೋಜನೆಗಳು ಕ್ಲಪ್ತ ಸಮಯದಲ್ಲಿ ಹಾಗೂ ತ್ವರಿತ ಗತಿಯಲ್ಲಿ ತಲುಪಿಸುವ ಉದ್ದೇಶದಿಂದ ಗ್ರಾಮ ಮಟ್ಟದ ಗ್ರಾಮ ಪಂಚಾಯತ್‌ ಕಛೇರಿಗಳಿಗೆ ಹೊಸ ಕಟ್ಟಡಗಳನ್ನು ಶಾಸಕರಾದ ವಿ ಸುನಿಲ್‌ ಕುಮಾರ್‌ರವರು ವಿವಿಧ ಅನುದಾನಗಳಿಂದ ನಿರಂತರವಾಗಿ ನೀಡುತ್ತಾ ಬಂದಿರುತ್ತಾರೆ.

ಇದರಿಂದ ಕ್ಷೇತ್ರದ ಹಲವಾರು ಗ್ರಾಮ ಪಂಚಾಯತ್‌ ಕಟ್ಟಡಗಳು ನೂತನವಾಗಿ ನಿರ್ಮಾಣಗೊಂಡು ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಸಮಪರ್ಕವಾಗಿ ನೀಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ 2024-25ನೇ ಸಾಲಿನ ಕ್ರಿಯಾಯೋಜನೆಗೆ ಕಾರ್ಕಳದ ಕೆಲವು ಗ್ರಾಮ ಪಂಚಾಯತ್‌ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದೀಗ ಮಂಡಳಿಯ ಆದೇಶದ ಮೇರೆಗೆ ಕಾರ್ಕಳದ ನೀರೆ, ನಲ್ಲೂರು, ನಂದಳಿಕೆ ಗ್ರಾಮಗಳಲ್ಲಿ ನೂತನ ಗ್ರಾಮ ಪಂಚಾಯತ್‌ ಕಟ್ಟಡ ನಿರ್ಮಾಣಕ್ಕೆ ತಲಾ ರೂ.10 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕರ ಜನಸೇವಾ ಕಛೇರಿ ‘ವಿಕಾಸ’ ಪ್ರಕಟಣೆಯಲ್ಲಿ ತಿಳಿಸಿದೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ