ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿರಾಕರಣೆ; ಕೊನೆ ಗಳಿಗೆಯಲ್ಲಿ ಕೆಎಂಸಿ‌ಯಲ್ಲಿ ಚಿಕಿತ್ಸೆ ಪಡೆದು ಪುನರ್ಜನ್ಮ ಪಡೆದ ಯುವಕ

ಉಡುಪಿ : ಕಳೆದ 15 ದಿನಗಳ ಹಿಂದೆ ಕೋಟ ಠಾಣೆ ವ್ಯಾಪ್ತಿಯಲ್ಲಿ ಅಪಘಾತಕ್ಕೆ ಒಳಗಾದ ಒರಿಸ್ಸಾದ ಕಾರ್ಮಿಕ ಯುವಕನಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೆ ಉಡುಪಿಗೆ ಹಿಂದಕ್ಕೆ ಕಳುಹಿಸಲಾಗಿತ್ತು. ಇನ್ನೇನು ಕೊನೆ ಘಳಿಗೆ ಸಾವು ಸಂಭವಿಸುವ ಸಂದರ್ಭ, ಸಮಾಜಸೇವಕ ವಿಶು ಶೆಟ್ಟಿಯವರು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ಯುವಕ ಇದೀಗ ಪುನರ್ಜನ್ಮ ಪಡೆದಿದ್ದಾನೆ.

ಒರಿಸ್ಸಾ ಮೂಲದ ಕೂಲಿ ಕಾರ್ಮಿಕ ಕೃಷ್ಣ(27) ಅಪಘಾತದಿಂದ ಉದರದ ಒಳಭಾಗ ತೀವ್ರ ಹೊಡೆತದಿಂದ ಚಿಂತಾಜನಕ ಪರಿಸ್ಥಿತಿ ಇದ್ದು ತುರ್ತು ಶಸ್ತ್ರಚಿಕಿತ್ಸೆಗೆ ಆಂಬುಲೆನ್ಸ್ ಮುಖಾಂತರ ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿದೆ ಉಡುಪಿಗೆ ವಾಪಾಸು ಕಳುಹಿಸಿದ್ದರು. ಪ್ರಾಣ ಉಳಿಸುವ ಅಮೂಲ್ಯ ಸಮಯದಲ್ಲಿ ರೋಗಿಯು 5 ಗಂಟೆಗಳ ಕಾಲ ಸಾವು ಬದುಕಿನ ಹೋರಾಟವನ್ನು ಆಂಬುಲೆನ್ಸ್‌ನಲ್ಲಿ ಅನಾವಶ್ಯಕವಾಗಿ ಕಳೆಯಬೇಕಾಯಿತು.

ಕೂಲಿ ಕಾರ್ಮಿಕನಾದ ಯುವಕ ಬಡತನದಿಂದ ಹೊರ ರಾಜ್ಯದಿಂದ ಇಲ್ಲಿಗೆ ಬಂದಿದ್ದು ಆತನ ಸಂಗಡಿಗರು ಕಂಗಾಲಾಗಿದ್ದರು. ವಿಷಯ ತಿಳಿದ ವಿಶು ಶೆಟ್ಟಿ ಕೂಡಲೇ ತಾನೇ ಜವಾಬ್ದಾರಿ ಹೊತ್ತು ಕೆಎಂಸಿ ಮಣಿಪಾಲಕ್ಕೆ ದಾಖಲಿಸಿ ತುರ್ತು ಶಸ್ತ್ರ ಚಿಕಿತ್ಸೆ ಮಾಡಿಸಿ 6 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದು, ಮುಂದಿನ ಆರೈಕೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಇದೀಗ ಯುವಕನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಊರಿಂದ ಬಂದ ಸಂಬಂಧಿ ಜೊತೆ ತನ್ನೂರಾದ ಒರಿಸ್ಸಾಗೆ ತೆರಳಿದ್ದಾನೆ.

Related posts

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!

Worlds Fastest Bhagvad Gita Writer Completing 18 Chapters & 700 Verses in Just 5.30 Hours

ಮೀನುಗಾರರ ಪ್ರತಿಭಟನೆಯಲ್ಲಿ ಪ್ರಚೋದನಕಾರಿ ಭಾಷಣ-ಹಿಂದೂ ಯುವಸೇನೆ ಮುಖಂಡನ ವಿರುದ್ಧ ಸುಮೊಟೋ ಕೇಸ್