ಮನೆಯಲ್ಲಿದ್ದ ರೆಫ್ರಿಜರೇಟರ್ ಸ್ಫೋಟ : ಉಪಕರಣಗಳು, ದಾಖಲೆ ಪತ್ರಗಳು ಬೆಂಕಿಗಾಹುತಿ

ಕಡಬ : ರೆಫ್ರಿಜರೇಟರ್ ಸ್ಫೋಟಗೊಂಡು ಮನೆಯೊಳಗೆ ಬೆಂಕಿ ಆವರಿಸಿ ಮನೆಯಲ್ಲಿದ್ದ ದಾಖಲೆ ಪತ್ರಗಳ ಸಹಿತ ಮನೆಯಲ್ಲಿದ್ದ ಉಪಕರಣಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾದ ಘಟನೆ ಕಡಬ ಕಾಲೇಜು ರಸ್ತೆಯಲ್ಲಿರುವ ಅಡ್ಡಗದ್ದೆ ಎಂಬಲ್ಲಿನ ಮನೆಯೊಂದರಲ್ಲಿ ಭಾನುವಾರ ಮಧ್ಯಾಹ್ನ ವೇಳೆ ನಡೆದಿದೆ.

ಕಡಬದ ಅಡ್ಡಗದ್ದೆ ನಿವಾಸಿ ಫಾರೂಕ್ ಎಂಬುವರ ಮನೆಯಲ್ಲಿ ಅವಘಡ ನಡೆದಿದ್ದು, ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ ಎಂದು ತಿಳಿದುಬಂದಿದೆ.

ಫಾರೂಕ್‌ರವರ ಪತ್ನಿ ಮತ್ತು ಮಕ್ಕಳು ಮದುವೆ ಸಮಾರಂಭಕ್ಕೆ ತೆರೆಳಿದ್ದು ಫಾರೂಕ್‌ರವರು ಕೆಲಸಕ್ಕೆ ತೆರಳಿದ್ದ ಸಮಯದಲ್ಲಿ ಈ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಅವಘಡ ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

ಮನೆಯ ಸುತ್ತ ಹೊಗೆ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಸಂಶಯಗೊಂಡು ಸಮೀಪಕ್ಕೆ ತೆರಳಿ ನೋಡಿದಾಗ ಮನೆಯ ಒಳಗೆ ಬೆಂಕಿ ಉರಿಯುತ್ತಿರುವುದು ಕಂಡು ಬಂದಿದೆ. ಬಳಿಕ ಊರವರು ಸೇರಿ ಬೆಂಕಿ ನಂದಿಸಿದ್ದಾರೆ.

Related posts

ಬಹು ನಿರೀಕ್ಷೆಯ `ಗಜಾನನ ಕ್ರಿಕೆಟರ್ಸ್’ 2026 ಜನವರಿಯಲ್ಲಿ ತೆರೆಗೆ….

Much Awaited Tulu movie Gajanana Cricketers set for worldwide release in January 2026

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ