ಸಿದ್ದರಾಮಯ್ಯ ಸರಕಾರ ಬಂದ ಬಳಿಕ ರಾಜ್ಯದಲ್ಲಿ ರೆಕಾರ್ಡ್ ಬ್ರೇಕ್ ಆದ ಹತ್ಯೆ-ಆತ್ಮಹತ್ಯೆ – ಸಿ.ಟಿ.ರವಿ ಆರೋಪ

ಮಂಗಳೂರು : ಸಿದ್ದರಾಮಯ್ಯ ಸರ್ಕಾರ ಬಂದ ಈ 13 ತಿಂಗಳಲ್ಲಿ ರಾಜ್ಯದಲ್ಲಿ ಹತ್ಯೆ ಮತ್ತು ಆತ್ಮಹತ್ಯೆ ಹಿಂದಿನ ಎಲ್ಲಾ ರೆಕಾರ್ಡ್ ಬ್ರೇಕ್ ಆಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು‌.

ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ಎನ್‌ಸಿಆರ್‌ಬಿ ಪ್ರಕಾರ ಕಳೆದ ನಾಲ್ಕು ತಿಂಗಳಲ್ಲಿ ಆದ ಹತ್ಯೆಯೇ 500ರ ಗಡಿ ದಾಟಿದೆ. ರೈತರ ಆತ್ಮಹತ್ಯೆ 700ರ ಗಡಿ ದಾಟಿದೆ. ಕೊಲೆ, ಸುಲಿಗೆ, ಭಯ ಇಲ್ಲದ ನಡವಳಿಕೆ ಕಂಡಾಗ ರಾಜ್ಯದಲ್ಲಿ ಕ್ರಿಮಿನಲ್ ಹಾಗೂ ಕಮ್ಯುನಲ್ ಎರಡೂ ಚಟುವಟಿಕೆಗಳು ಹೆಚ್ಚಳವಾಗಿದೆ. ಸರಕಾರ ಕ್ರಿಮಿನಲ್‌ಗಳ ಪರವಾಗಿ ಮೃದುಧೋರಣೆ, ಕಮ್ಯುನಲ್‌ಗಳ ಪರವಾಗಿ ಸ್ಪಷ್ಟ ನಿಲುವು ಹೊಂದಿರುವುದೇ ಈ ಸ್ಥಿತಿಗೆ ಕಾರಣ ಎಂದರು.

ಚುನಾವಣೆ ಬಳಿಕ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಟಾರ್ಗೆಟ್ ಆಗುತ್ತಿದ್ದಾರೆ. ಸರ್ಕಾರದ ಕಮ್ಯುನಲ್ ನೀತಿ, ಮತಾಂಧರಿಗೆ ಬೆಂಬಲ ಸಿಕ್ಕಂತಾಗಿದೆ‌. ಐಸಿಸ್ ಸೇರಿದವರು ರಾಜ್ಯದಲ್ಲಿ ಸಕ್ರಿಯರಾಗಿದ್ದಾರೆ ಎಂಬ ವರದಿ ಬಂದಿದೆ. 50ಕ್ಕೂ ಅಧಿಕ ಸ್ಲೀಪರ್ ಸೆಲ್ ಗಳು ರಾಜ್ಯದಲ್ಲಿ ಸಕ್ರಿಯವಾಗಿದೆ. ಸ್ಪೀಕರ್ ಖಾದರ್‌ರವರು ಹೊರಗಿನವರು ಅಂಥ ಹೇಳಬೇಕಾಗಿದ್ದು‌‌ ಐಸಿಸ್ ಜೊತೆ ನಂಟು ಇರುವವನ್ನು. ಅವರನ್ನು ಮೊದಲು ಪಾಕಿಸ್ತಾನಕ್ಕೆ ಅಟ್ಟಬೇಕಿದೆ. ಈ ಸರ್ಕಾರ ಮತಬ್ಯಾಂಕ್‌ಗಾಗಿ ಮತಾಂಧರನ್ನು ಬೆಂಬಲಿಸುತ್ತಿದೆ‌. ಇದು ಇಡೀ ದೇಶಕ್ಕೆ ಬಹಳ ಅಪಾಯಕಾರಿ. ಓಟ್ ಜಿಹಾದ್ ಭಾರತದಲ್ಲಿ ಸಂವಿಧಾನವನ್ನೇ ಮುಗಿಸುವ ಸಂಚು ನಡೆಸುತ್ತಿದೆ‌. ಕಾಂಗ್ರೆಸ್ ಓಟ್ ಜಿಹಾದ್ ಫಲಾನುಭವಿಯಾಗಿದ್ದು, ಇವರು ಜಿಹಾದಿ ಮಾನಸಿಕತೆ ಕುಮ್ಮಕ್ಕು ಕೊಟ್ಟಿದ್ದರಿಂದಲೇ ದೇಶ ವಿಭಜನೆಯಾಗಿದೆ. ಅದರ ಪರಿಣಾಮವೇ ಲವ್ ಜಿಹಾದ್, ಭಯೋತ್ಪಾದನೆ ನಡೆಯುತ್ತಿದೆ ಎಂದರು.

ರಸ್ತೆ ಮಧ್ಯೆ ನಮಾಜ್ ಮಾಡಿದವರ ಕೇಸ್ ವಾಪಾಸ್ ಪಡೆದ ಸರ್ಕಾರ ಪ್ರಶ್ನೆ ಮಾಡಿದ ಶರಣ್ ಪಂಪ್‌ವೆಲ್ ಮೇಲೆ ಕೇಸ್ ಹಾಕಿತು. ಈ‌ ಮೂಲಕ ಪೊಲೀಸರಿಗೆ ಮತಾಂಧರ ಬೆಂಬಲಿಸುವ ಸಂದೇಶ ಕೊಟ್ಟಂತಾಯಿತು ಎಂದು ಸಿ.ಟಿ‌.ರವಿ ಹೇಳಿದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ

ಮಾರಿದ ಹಳೆಯ ಬಸ್ಸನ್ನು ಕದ್ದು ತಂದ ಆರೋಪ – ತಂದೆ ಮಗನ ವಿರುದ್ಧ ದೂರು ದಾಖಲು !